Advertisement

ಹೊಸ ವರ್ಷಕ್ಕೆ ಎಸ್.ಬಿ.ಐ. ಗೃಹ ಸಾಲದ ಬಡ್ಡಿದರ ಇಳಿತ

09:53 AM Dec 31, 2019 | Hari Prasad |

ಹೊಸದಿಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಎಕ್ಸಟರ್ನಲ್ ಬೆಂಚ್ ಮಾರ್ಕ್ ರೇಟನ್ನು (ಇಬಿಆರ್ ) ಶೇ.0.25ರಷ್ಟು ಇಳಿಕೆ ಮಾಡಿದ್ದು, ಗೃಹ ಸಾಲದ ಬಡ್ಡಿ ದರವನ್ನು ಕಡಿತ ಮಾಡುವುದಾಗಿ ತಿಳಿಸಿದೆ. ಇಬಿಆರ್ ಇಳಿಕೆ ಮಾಡುವುದರ ಪರಿಣಾಮವಾಗಿ ಗೃಹ ಸಾಲದ ಬಡ್ಡಿ ದರವು ಈಗಿನ ಶೇ.8.05 ರಿಂದ ಶೇ.7.80ಕ್ಕೆ ಇಳಿಕೆಯಾಗಲಿದೆ. ಹೊಸ ಪರಿಷ್ಕೃತ ದರಗಳು ಜನವರಿ 1ರಿಂದ ಜಾರಿಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ಎಸ್‌ಬಿಐ ಹೇಳಿದೆ.

Advertisement

‘ಇಬಿಆರ್ ಇಳಿಕೆ ಪರಿಣಾಮ ಗೃಹ ಸಾಲದ ಮೇಲಿನ ಬಡ್ಡಿದರ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳ (ಎಂಎಸ್‌ಎಂಇ) ಸಾಲದ ಬಡ್ಡಿ ದರ ಶೇ.0.25ರಷ್ಟು ಕಡಿಮೆಯಾಗುತ್ತದೆ. ತಮ್ಮ ಸಾಲಗಳನ್ನು ಇಬಿಆರ್‌ಗೆ ಜೋಡಣೆ ಮಾಡಿದ ಗ್ರಾಹಕರಿಗೆ ಇದು ಅನ್ವಯವಾಗುತ್ತದೆ. ಜತೆಗೆ ಹೊಸ ಗ್ರಾಹಕರಿಗೂ ಲಾಭವಾಗುತ್ತದೆ,” ಎಂದು ಎಸ್‌ಬಿಐ ಹೇಳಿದೆ.

ಹೊಸದಾಗಿ ಗೃಹ ಸಾಲ ಪಡೆಯುವವರಿಗೆ ಇನ್ನು ಮುಂದೆ ವಾರ್ಷಿಕ ಶೇ.7.90ರ ಬಡ್ಡಿ ದರ ಅನ್ವಯವಾಗಲಿದೆ. ಈ ಮೊದಲು ಶೇ.8.15ರ ಬಡ್ಡಿ ದರ ಇತ್ತು.

ಎಸ್‌ಬಿಐ ರೆಪೊ ದರ ಪ್ರಸ್ತುತ ಶೇ.5.15ರಷ್ಟಿದ್ದು, ರೆಪೊ ದರಕ್ಕೆ ತಕ್ಕನಾಗಿ ಬ್ಯಾಂಕ್‌ಗಳು ತಮ್ಮ ಇಬಿಆರ್‌ಗಳನ್ನು ನೀಡಬೇಕು. ಆಗ ಮಾತ್ರ ರೆಪೊ ದರ ಇಳಿಕೆಯ ಪ್ರಯೋಜನ ಗ್ರಾಹಕರಿಗೆ ಸಿಗಲು ಸಾಧ್ಯವಾಗುತ್ತದೆ. ಈ ಹಿನ್ನಲೆ ಎಸ್‌ಬಿಐ ಒಂದಿಷ್ಟು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ. ಆದರೆ, ಅನೇಕ ಬ್ಯಾಂಕ್‌ಗಳು ರೆಪೊ ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next