ಸಸಿಹಿತ್ಲು: ಕುಸ್ತಿ ಪರಂಪರೆಯ ಕ್ರೀಡೆಯಾಗಿದ್ದು, ಇಂದಿನ ಆಧುನಿಕ ಸ್ಪರ್ಶದೊಂದಿಗೆ ಸಸಿಹಿತ್ಲು ಗ್ರಾಮೀಣ ಭಾಗದಲ್ಲಿ ಕಡಲ ತಡಿಯಲ್ಲಿ ರಾಜ್ಯಮಟ್ಟದ ಪಂದ್ಯಾಟ ನಡೆಸಿರುವುದು ಶ್ಲಾಘನೀಯ. ಕುಸ್ತಿ ಪೈಲ್ವಾನ್‌ರಿಗೆ ಕ್ರೀಡಾ ಹಾಸ್ಟೆಲ್‌ನಲ್ಲಿ ವಿಶೇಷ ಆದ್ಯತೆ ಸಿಗಲಿ ಎಂದು ಉಡುಪಿಯ ಶ್ಯಾಮಿಲಿ ಚಾರಿಟೆಬಲ್ ಟ್ರಸ್ಟ್‌ನ ಚೇರ್‌ಮನ್ ನಾಡೋಜ ಜಿ. ಶಂಕರ್ ಹೇಳಿದರು.
ಸಸಿಹಿತ್ಲು ಬೀಚ್ ಪ್ರದೇಶದಲ್ಲಿ ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಸಂಯೋಜನೆಯಲ್ಲಿ ನಡೆದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದ ಸಮಾರೋಪದಲ್ಲಿ ಮಾತನಾಡಿದರು. ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಕರ್ನಾಟಕ ಕುಸ್ತಿ ಸಂಘ ಮತ್ತು ದ.ಕ. ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಜಂಟಿ ಸಹಕಾರದಲ್ಲಿ ಕುಸ್ತಿ ಪಂದ್ಯಾಟ ನಡೆಸಲಾಯಿತು. ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕ ಡಾ| ಭರತ್ ಶೆಟ್ಟಿ, ಲಾಲಾಜಿ ಆರ್. ಮೆಂಡನ್ ಮಾತನಾಡಿದರು.
ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಜಿಲ್ಲಾ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಕರ್ಕೇರ, ಉದ್ಯಮಿ ವೇದ್‌ಪ್ರಕಾಶ್ ಎಂ. ಶ್ರೀಯಾನ್, ಅನಿಲ್ ಸಾಲ್ಯಾನ್, ದಿನೇಶ್ ಕುಂದರ್, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯಕೋಟ್ಯಾನ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಈಶ್ವರ ಕಟೀಲು, ಮೀನು ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಡಾ| ದಯಾನಂದ ನಾಯ್ಕ, ಉಡುಪಿ ಜಿ.ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಶರತ್ ಎಲ್. ಕರ್ಕೇರ, ಯತೀಶ್ ಬೈಕಂಪಾಡಿ, ಪುಂಡಲೀಕ ಹೊಸಬೆಟ್ಟು, ಮಂಗಳೂರು ವಿವಿ ರಿಜಿಸ್ಟ್ರಾರ್ ಎ.ಎಂ. ಖಾನ್, ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್‌ಕುಮಾರ್ ಬಿ.ಎನ್., ಶ್ರೀ ಆಂಜನೇಯ ವ್ಯಾಯಾಮ ಶಾಲೆಯ ಗೌರವ ಅಧ್ಯಕ್ಷ ವಿಟ್ಠಲ ಬಂಗೇರ, ಸ್ಥಾಪಕ ಸದಸ್ಯ ಕೇಶವ ಸಾಲ್ಯಾನ್, ಉಪಾಧ್ಯಕ್ಷ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಅಧ್ಯಕ್ಷ ವಿನೋದ್‌ಕುಮಾರ್ ಸ್ವಾಗತಿಸಿದರು, ಅನಿಲ್‌ಕುಮಾರ್ ಪರಿಚಯಿಸಿದರು. ಶೋಭೇಂದ್ರ ಸಸಿಹಿತ್ಲು ವಂದಿಸಿದರು, ಸುರೇಶ್‌ಕುಮಾರ್ ಸೂರಿಂಜೆ ನಿರೂಪಿಸಿದರು.
ಗೌರವ, ಸಮ್ಮಾನ
ಈ ಸಂದರ್ಭ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಪುಟ್ಬಾಲ್ ಆಟಗಾರ ಬಾಲಕೃಷ್ಣ ಕುಂದರ್, ಪವರ್‌ಲಿಫ್ಟರ್ ವಾಸುದೇವ ಸಾಲ್ಯಾನ್, ಕ್ರೀಡಾ ತರಬೇತುದಾರ ದಿನೇಶ್ ಕುಂದರ್ ಅವರನ್ನು ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಲಕ್ಷ್ಮಣ ಕುಂದರ್ ರನ್ನು ವಿಶೇಷವಾಗಿ ಸಮ್ಮಾನಿಸಲಾಯಿತು.