Advertisement

ಖಾಸಗಿ ಕ್ರಯೋಜನಿಕ್‌ ಪ್ರಯೋಗ ಯಶಸ್ವಿ

07:08 PM Nov 26, 2021 | Team Udayavani |

ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ, ಪರಿಪೂರ್ಣ ಕ್ರಯೋಜೆನಿಕ್‌ ರಾಕೆಟ್‌ ಎಂಜಿನ್‌ನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನೆರವೇರಿದೆ.

Advertisement

ಹೈದರಾಬಾದ್‌ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್‌ ಸ್ಕೈರೂಟ್‌ ಏರೋಸ್ಪೇಸ್‌ ಅಭಿವೃದ್ಧಿಪಡಿಸಿರುವ ಈ ಎಂಜಿನ್‌ಗೆ, ಭಾರತದ ರಾಕೆಟ್‌ ವಿಜ್ಞಾನಿ ಸತೀಶ್‌ ಧವನ್‌ ಗೌರವಾರ್ಥ “ಧವನ್‌-1′ ಎಂದು ಹೆಸರಿಡಲಾಗಿದೆ.

ಈ ಕ್ರಯೋಜೆನಿಕ್‌ ರಾಕೆಟ್‌ ಎಂಜಿನ್‌ ಅನ್ನು 3ಡಿ ಪ್ರಿಂಟಿಂಗ್‌ ಬಳಸಿ ಅಭಿವೃದ್ಧಿಪಡಿಸಲಾಗಿದ್ದು, ಶೇ.95ರಷ್ಟು ಉತ್ಪಾದನಾ ಅವಧಿ ಉಳಿತಾಯವಾಗಿದೆ. ಈ ಪ್ರಯೋಗದಿಂದಾಗಿ ಇಂಥ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿದ ಜಗತ್ತಿನ ಬೆರಳೆಣಿಕೆಯ ಕಂಪನಿಗಳಲ್ಲಿ ನಮ್ಮದೂ ಒಂದು ಎಂಬ ಹೆಗ್ಗಳಿಕೆ ಸಿಕ್ಕಿದೆ ಎಂದು ಸ್ಕೈರೂಟ್‌ ಏರೋಸ್ಪೇಸ್‌ ಸಹಸ್ಥಾಪಕ ಪವನ್‌ ಕುಮಾರ್‌ ಚಂದನಾ ಹೇಳಿದ್ದಾರೆ.

ಈ ಮೈಲುಗಲ್ಲಿನ ಮೂಲಕ ಸ್ಕೈರೂಟ್‌ ತನ್ನ ಎಲ್ಲ ಮೂರು ಪ್ರೊಪಲ್ಶನ್‌ ತಂತ್ರಜ್ಞಾನಗಳನ್ನು ಪರಿಚಯಿಸಿದಂತಾಗಿದೆ. ಇವುಗಳನ್ನು ತಮ್ಮ ಮೊದಲ ಸರಣಿಯ ಉಪಗ್ರಹ ಉಡಾವಣಾ ವಾಹನಗಳಲ್ಲಿ ಬಳಸಲು ಕಂಪನಿ ನಿರ್ಧರಿಸಿದೆ.

ಇದನ್ನೂ ಓದಿ:ನಿನ್ನೆ ಬಿಜೆಪಿ ಅಭ್ಯರ್ಥಿ, ಇಂದು ಕಾಂಗ್ರೆಸ್ ಅಭ್ಯರ್ಥಿಯಿಂದ ಸಂಸದೆ ಸುಮಲತಾ ಭೇಟಿ

Advertisement

ವೈಶಿಷ್ಟ್ಯವೇನು?
– ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿರುವ ಎಂಜಿನ್‌
– 3ಡಿ ಪ್ರಿಂಟಿಂಗ್‌ ತಂತ್ರಜ್ಞಾನವಿರುವ ರಾಕೆಟ್‌ ಎಂಜಿನ್‌
– ಇಂಧನವಾಗಿ ದ್ರವೀಕೃತ ನೈಸರ್ಗಿಕ ಅನಿಲ ಮತ್ತು ದ್ರವೀಕೃತ ಆಮ್ಲಜನಕ ಬಳಕೆ
– ಇದು ಅತ್ಯಧಿಕ ಕ್ಷಮತೆಯುಳ್ಳ, ಅಗ್ಗದ, ಸ್ವತ್ಛ ರಾಕೆಟ್‌ ಇಂಧನವಾಗಿದೆ

 

Advertisement

Udayavani is now on Telegram. Click here to join our channel and stay updated with the latest news.

Next