Advertisement

ತೊಡಿಕಾನ-ಪಟ್ಟಿ ರಸ್ತೆ ದುರಸ್ತಿ ಆರಂಭಿಸಿ: ಬೋಪಯ್ಯ

12:45 PM Aug 26, 2018 | |

ಅರಂತೋಡು: ತೊಡಿಕಾನ- ಪಟ್ಟಿ – ಕರಿಕೆ ರಸ್ತೆಯ ಮೂಲಕ ಕೊಡಗಿಗೆ ಸಂಪರ್ಕ ಕಲ್ಪಿಸಲು ರವಿವಾರದಿಂದಲೇ ಊರವರು ಶ್ರಮದಾನದ ಮೂಲಕ ಕೆಲಸ ಆರಂಭಿಸುವಂತೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದ್ದಾರೆ.

Advertisement

ಜೋಡುಪಾಲ ನಿರಾಶ್ರಿತರ ಅರಂತೋಡು, ಸಂಪಾಜೆ ಸಹಾಯ ಕೇಂದ್ರಕ್ಕೆ ಶಾಸಕ ಕೆ.ಜಿ. ಬೋಪಯ್ಯ ಆಗಮಿಸಿದ ಸಂದರ್ಭದಲ್ಲಿ ತೊಡಿಕಾನ -ಪಟ್ಟಿ ರಸ್ತೆ ದುರಸ್ತಿಯನ್ನು ಶ್ರಮದಾನದಿಂದ ಮಾಡುತ್ತೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಸಮಸ್ಯೆ ಮಾಡಬಾರದು ಎಂದು ಗ್ರಾಮಸ್ಥರು ಮನವಿ ಮಾಡಿದ್ದರು. ಅದರಂತೆ ಕೊಡಗಿನ ಡಿ.ಎಫ್ .ಒ. ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರು, ನಾಳೆಯಿಂದಲೇ ರಸ್ತೆ ದುರಸ್ತಿ ಆರಂಭ ಮಾಡಬಹುದು ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ರಸ್ತೆ ವೀಕ್ಷಣೆ ಮಾಡುವಂತೆ ಕೊಡಗು ಜಿ.ಪಂ. ಸಿಇಒ ಪ್ರಶಾಂತ್‌ ಮಿಶ್ರಾ ಅವರಿಗೂ ಸೂಚಿಸಿದರು.

ಕೃಷಿಕ ವಸಂತ್‌ ತೊಡಿಕಾನ ಅವರು, ತೊಡಿಕಾನ- ಪಟ್ಟಿ -ಕರಿಕೆ ಸಂಪರ್ಕ ರಸ್ತೆ ಸುಳ್ಯ ತಾಲೂಕು ಕೇಂದ್ರದಿಂದ ಅತೀ ಹತ್ತಿರದ ಹಾದಿ. ತೊಡಿಕಾನದಿಂದ ಕೇವಲ 18 ಕಿ.ಮೀ. ಅಂತರದಲ್ಲಿ ಕೊಡಗಿನ ಭಾಗಮಂಡಲವನ್ನು ತಲುಪಬಹುದು. ಲಘು ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದು. ಜನರ ಶ್ರಮ, ಇಂದನ ಹಾಗೂ ಸಮಯವೂ ಉಳಿತಾಯ ಆಗುತ್ತದೆ ಎಂದು ಹೇಳಿದರು. 

ನಿರಾಶ್ರಿತರು ತಮ್ಮ ಸಮಸ್ಯೆ ಹೇಳಿಕೊಂಡಾಗ, ಯಾವುದೇ ಕಾರಣಕ್ಕೂ ಆತಂಕ ಗೊಳ್ಳ ಬೇಡಿ. ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಕೃಷ್ಣಮೂರ್ತಿ, ಸುಳ್ಯ ತಹಶೀಲ್ದಾರ್‌ ಕುಂಞಮ್ಮ, ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್‌ ಕುಂದಲ್ಪಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next