Advertisement
ಹೆತ್ತವರು ಪುತ್ರಿಯರನ್ನು ಯಾವ ರೀತಿ ಗೌರವಿಸುತ್ತಾರೋ ಅದೇ ರೀತಿ ಪುತ್ರರನ್ನು ಹೆಚ್ಚು ಹೊಣೆಗಾರಿಕೆಯುಳ್ಳವರನ್ನಾಗಿ ಮಾಡಬೇಕು ಎಂದು ಹೇಳಿದ್ದಾರೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಜಾರಿಗೊಳಿಸಿರುವುದು ಸರಕಾರದ ಬದ್ಧತೆಯನ್ನು ತೋರಿಸಿದೆ ಎಂದರು. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ತಾವು ಸುರಕ್ಷಿತ ಎಂಬ ಭಾವನೆ ಮೂಡಿಸಬೇಕು. ಅದಕ್ಕಾಗಿ ಹೆಣ್ಣು ಮಕ್ಕಳನ್ನು ಹೆತ್ತವರು ಗೌರವಿಸಬೇಕು, ಪುತ್ರರನ್ನು ಹೆಚ್ಚು ಜವಾಬ್ದಾರಿಯುತರನ್ನಾಗಿಸುವ ಬಗ್ಗೆ ಕುಟುಂಬದಲ್ಲಿ ಆದ್ಯತೆ ಸಿಗಬೇಕು ಎಂದಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನವನ್ನು ಪ್ರಧಾನಿ ಉದ್ಘಾಟಿಸಿದ್ದಾರೆ. ಇದಲ್ಲದೆ ಗ್ರಾ.ಪಂ.ಗಳಲ್ಲಿ ಇ-ಪಂಚಾಯತ್ ವ್ಯವಸ್ಥೆ ಜಾರಿಗೊಳಿಸಿದ ಹಲವು ಪಂಚಾಯತ್‌ಗಳನ್ನು ಇದೇ ಸಂದರ್ಭ ದಲ್ಲಿ ಗೌರವಿಸಲಾಯಿತು. ಇಂದ್ರಧನುಷ್ ಯೋಜನೆಯಡಿ ಶೇ.100ರಷ್ಟು ಲಸಿಕೆ ಹಾಕಿಸಿಕೊಂಡ, ಸೌಭಾಗ್ಯ ಯೋಜನೆ ಅಡಿಯಲ್ಲಿ ಎಲ್‌ಪಿಜಿ ಸಂಪರ್ಕ ಸಾಧಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಹೊಗೆರಹಿತ ಅಡುಗೆ ಮನೆಗಳನ್ನು ಹೊಂದಿದ ಗ್ರಾ.ಪಂ.ಗಳನ್ನೂ ಗೌರವಿಸಲಾಯಿತು. ಇದೇ ವೇಳೆ, ಉದ್ಯೋಗ ಖಾತ್ರಿ ಯೋಜನೆಗೆ ನೀಡಲಾದ ಮೊತ್ತವನ್ನು ಬೇಸಗೆಯ 3 ತಿಂಗಳ ಕಾಲ ಜಲ ಸಂರಕ್ಷಣೆಗಾಗಿ ಬಳಸುವಂತೆ ಪಂಚಾಯತ್‌ಗಳಿಗೆ ಮೋದಿ ಕರೆ ನೀಡಿದರು.