Advertisement

ವಿಶ್ವ ಜಿಗೀಷದ್‌ ಯಾಗ ಆರಂಭ

10:03 AM Apr 11, 2018 | Team Udayavani |

ಪಾವಂಜೆ: ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣ ಹಾಗೂ ಭಾರತವನ್ನು ‘ವಿಶ್ವ ಗುರು’ವನ್ನಾಗಿಸುವ ಸಂಕಲ್ಪದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ವಿಶ್ವ ಜಿಗೀಷದ್‌ ಯಾಗದ ಪ್ರಕ್ರಿಯೆ ಆರಂಭಗೊಂಡಿದೆ.

Advertisement

ಎ. 9ರಂದು ಗೋಧೋಳಿ ಲಗ್ನದಲ್ಲಿ ಕಲಶ ಸ್ಥಾಪನೆ ಮಾಡಿ, ಗಂಗಾಪೂಜೆ ಕೈಗೊಂಡು, ಮುತ್ತೈದೆಯರು ವೇದ ಮಂತ್ರಗಳ ಘೋಷಣೆಯ ಜತೆಗೆ ಗಂಗಾ ಕಲಶವನ್ನು ದೇಗುಲದ ಶಾರಧ್ವತ ಯಜ್ಞಾಂಗಣಕ್ಕೆ ತಂದರು. ಯಜ್ಞಾಂಗಣದಲ್ಲಿ ಪ್ರತಿಷ್ಠಾಪನೆಗೊಂಡ ಗೌತಮೇಶ್ವರ ಶಿವಲಿಂಗಕ್ಕೆ ದೀಕ್ಷಾ ಬದ್ಧ ಹದಿನಾರು ದೀಕ್ಷಿತರು ಅಭಿಷೇಕ ಮಾಡಿ ಯಾಗ ಸಾಂಗತೆಯ ಸಂಕಲ್ಪ ಸ್ವೀಕರಿಸಿದರು.

ಎ.10ರಂದು ಮುಂಜಾನೆಯಿಂದ ಯಾಗದ ಅಗ್ನಿ ಕುಂಡವಾದ ಪ್ರಧಾನ ಕುಂಡ, ಸಂಘಪ್ರಾದ್ವ, ಋಷಿ ಸ್ವರ, ಕೃತವೇಶೀ, ಹಿಮರುಚಿ ಯಾಗದ ಕುಂಡದಲ್ಲಿ ವೈದಿಕರು ಮಂತ್ರೋಚ್ಛಾರದೊಂದಿಗೆ ಯಾಗದ ಪ್ರಕ್ರಿಯೆ ಆರಂಭಗೊಂಡಿತು. ಯಾಗದ ನಿರ್ದೇಶಕರಾದ ವೇದ ಕೃಷಿಕ ಕೆ.ಎಸ್‌. ನಿತ್ಯಾನಂದ ಅವರು ಯಾಗದ ಸ್ವರೂಪ ಹಾಗೂ ಮೂಲ ಉದ್ದೇಶಗಳನ್ನು ಉದ್ಗೋಷಿಸಿದರು. ಭಾರತ ಪರಿಕ್ರಮ ಯಾತ್ರೆ ಕೈಗೊಂಡ ಸೀತಾರಾಂ ಕೆದಿಲಾಯ ಅವರು ವಿಶೇಷವಾಗಿ ಯಾಗದ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ದೇಗುಲದ ಧರ್ಮದರ್ಶಿ ಡಾ| ಯಾಜಿ ನಿರಂಜನ್‌ ಭಟ್‌, ಮೊಕ್ತೇಸರ ಎಂ. ಶಶೀಂದ್ರ ಕುಮಾರ್‌, ಯಾಗದ ವಕ್ತಾರ ಡಾ| ಸೋಂದಾ ಭಾಸ್ಕರ ಭಟ್‌ ಕಟೀಲು, ಯಾಗ ಉಪ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು. ಬೆಳಗ್ಗೆ ಜಾತೂಕರ್ಣ ವೇದಿಕೆಯಲ್ಲಿ ಕಡಂಬೋಡಿ ಆಶ್ರಯ ಮಹಿಳಾ ಮಂಡಳಿಯಿಂದ ಭಜನ ಸಂಕೀರ್ತನೆ ನಡೆಯಿತು. ವಿವಿಧ ಸಂಘ- ಸಂಸ್ಥೆಗಳ ಪದಾ ಧಿಕಾರಿಗಳು ಸ್ವಯಂ ಸೇವಕರಾಗಿ ಅನ್ನಪ್ರಸಾದ ವಿತರಣೆಯಲ್ಲಿ ತೊಡಗಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next