Advertisement

ಬಸವಣ್ಣನ ಐಕ್ಯಮಂಟಪ ದುರಸ್ತಿ ಕಾಮಗಾರಿ ಆರಂಭ

10:43 PM Oct 12, 2019 | Lakshmi GovindaRaju |

ಕೂಡಲಸಂಗಮ: ಬಸವಣ್ಣನವರ ಐಕ್ಯ ಮಂಟಪ ದುರಸ್ತಿ ಕಾಮಗಾರಿ ಶನಿವಾರ ಆರಂಭಗೊಂಡಿದೆ. ಬಸವಣ್ಣನವರು ಲಿಂಗೈಕ್ಯರಾದ ಸ್ಥಳದ ಲಿಂಗಕ್ಕೆ 1.5/1.3 ಮೀಟರ್‌ ಅಳತೆಯ ರಕ್ಷಾಕವಚ, ಮಂಟಪಕ್ಕೆ 3.2 ಉದ್ದ-ಅಗಲ, 4 ಮೀಟರ್‌ ಎತ್ತರದ ರಕ್ಷಾ ಕವಚ ಅಳವಡಿಸಲಾಯಿತು.

Advertisement

ರಕ್ಷಾ ಕವಚ ಸ್ಟೀಲ್‌ನಿಂದ ಕೂಡಿದ್ದು, ಲಿಂಗಕ್ಕೆ ಬಟ್ಟೆ ಸುತ್ತಿ ರಕ್ಷಾ ಕವಚ ನಿರ್ಮಿಸಿ, ಥರ್ಮಾ ಕೋಲ್‌ ಬಾಲ್‌ಗ‌ಳನ್ನು ಹಾಕಲಾಗಿದೆ. 87 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ 4 ತಿಂಗಳ ಅವ ಧಿಯ ಕಾಮಗಾರಿ ಇದಾಗಿದ್ದು, ನುರಿತ 50 ಕಾರ್ಮಿಕರ ತಂಡ ಬಂದಿದೆ.

ಹಗಲು, ರಾತ್ರಿ ಕಾರ್ಯ ನಿರ್ವಹಿಸಿ 2 ತಿಂಗಳಲ್ಲಿ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಗುತ್ತಿಗೆದಾರ ಎಂಜಿನಿಯರ್‌ ಕಾರ್ತಿಕ ಬಡಿಗೇರ ತಿಳಿಸಿದ್ದಾರೆ. ಬಸವಣ್ಣನ ಐಕ್ಯಮಂಟಪದ ಬಾವಿಯ ಒಳಭಾಗದ ಗೋಡೆ, ಮೆಟ್ಟಿ ಲಿನ ಕೆಳಭಾಗ, ಮೇಲ್ಛಾವಣಿ ಶಿಥಿಲ ಗೊಂಡ ಪರಿಣಾಮ ಮೇ 22ರಿಂದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next