Advertisement

ಧರೆ ತಣಿಸಿದ ಮುಂಗಾರು: ಕೃಷಿ ಕಾರ್ಯ ಜೋರು

06:15 PM May 30, 2022 | Team Udayavani |

ಆಲೂರು: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ತೀವ್ರಗೊಂಡಿವೆ. ಪೂರ್ವ ಮುಂಗಾರು ಮಳೆಯೂ ವಾಡಿಕೆಗಿಂತ ಹೆಚ್ಚು ಬಿದ್ದಿರುವುದು ಮತ್ತು ಬೀಳುತ್ತಿರುವುದು ಹೊಲ, ಗದ್ದೆಗಳಲ್ಲಿ ರೈತರು ಉಳುಮೆ ಮತ್ತು ಬಿತ್ತನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

ತಾಲೂಕಿನ ಹೊಲ ಗದ್ದೆಗಳಲ್ಲಿ ಎತ್ತುಗಳೊಂದಿಗೆ ನೇಗಿಲ ಹಿಡಿದು ಉಳುಮೆ ಮಾಡುವ ರೈತರೇ ಇಲ್ಲವಾಗಿದ್ದರೆ. ನೇಗಿಲ ಯೋಗಿಗಳ ಅಭಾವ ದಿಂದ ರೈತರು ಈಗ ಟ್ರಾಕ್ಟರ್‌ ಮೂಲಕ ಉಳುಮೆ ಮಾಡುವಂತಾಗಿದೆ. ಇದರಿಂದ ತಾಲೂಕಿನಲ್ಲಿ ಟ್ರಾಕ್ಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೊಲಗಳಲ್ಲಿ ಈಗ ಟ್ರಾಕ್ಟರ್‌ ಮೂಲಕ ಉಳುಮೆ ಮಾಡಿ, ನಂತರ ಎತ್ತುಗಳನ್ನು ಹೊಂದಿರುವ ರೈತರ ಸಹಾಯದಿಂದ ಬಿತ್ತನೆ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಒಂದು ಎಕರೆ ಉಳುಮೆ ಮಾಡಲು ಟ್ರಾಕ್ಟರ್‌ ಬಾಡಿಗೆ ವೆಚ್ಚ 900 ರಿಂದ 1000 ರೂ. ಆಗಿದೆ. ಎರಡು ಗಂಟೆಯಲ್ಲಿ ಒಂದು ಎಕರೆ ಹೊಲವನ್ನು ಎರಡು ಬಾರಿ ಉಳುಮೆ ಮಾಡಿಕೊಡಲಾಗುತ್ತಿದೆ.

ನಾಟಿ ರಾಸುಗಳ ಸಂಖ್ಯೆ ಕ್ಷೀಣ: ತಾಲೂಕಿನ ಗ್ರಾಮಗಳ ರೈತರ ಪ್ರತಿ ಮನೆಯಲ್ಲೂ ಒಂದು ಅಥವಾ ಎರಡು ಜೋಡಿ ಎತ್ತುಗಳು ಇರುತ್ತಿದ್ದವು. ಆದರೆ ಇಂದು ಹೈನುಗಾರಿಕೆ ಮಾಡುವ ಉದ್ದೇಶದಿಂದ ಸಾಕಿರುವ ಹಸುಗಳನ್ನು ಬಿಟ್ಟರೆ ಹಳ್ಳಿಗಳಲ್ಲಿ ನಾಟಿ ರಾಸುಗಳೇ ಇಲ್ಲವಾಗಿವೆ. ತಾಲೂಕಿನ ಪಾಳ್ಯ ಹಾಗೂ ಕಸಬಾ ಹೋಬಳಿ ಮಾತ್ರ ನಾಟಿ ರಾಸುಗಳು ಅಲ್ಲಲ್ಲಿ ಕಂಡು ಬರುತ್ತದೆ. ಉಳಿದ ಹೋಬಳಿಗಳಲ್ಲಿ ನಾಟಿ ರಾಸುಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಶೇ.90ರಷ್ಟು ಸಿಂಧು ಹಸುಗಳನ್ನು ಹೈನುಗಾರಿಕೆಗಾಗಿ ಉದ್ದೇಶಕ್ಕಾಗಿ ಬಳಸುತ್ತಿರುವುದು ಗಮನಾರ್ಹವಾಗಿದೆ.

ಟ್ರ್ಯಾಕ್ಟರ್‌ಗಳ ಅವಲಂಬನೆ: ರೈತಾ ಜಯರಾಂ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗುತ್ತಿದ್ದು ಹೊಲ ಉಳುಮೆ ಮಾಡಿಕೊಳ್ಳಲು ಕಾಲ ಪಕ್ವಾವಾಗಿದೆ. ಅದರೆ, ಇತ್ತೀಚೆಗೆ ಉಳುಮೆ ಎತ್ತುಗಳನ್ನು ಸಾಕಲು ಕಡಿಮೆಯಾಗಿದೆ. ಉಳುಮೆ ಗೆ ಟ್ರ್ಯಾಕ್ಟರ್‌ ಗಳನ್ನೇ ಅವಲಂಬಿಸಬೇಕಾಗಿದೆ. ನಮ್ಮ ಸಮಯಕ್ಕೆ ಸರಿಯಾಗಿ

Advertisement

ಟ್ರ್ಯಾಕ್ಟರ್‌ಗಳು ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸೋನೆ ಮಳೆ ಅರಂಭವಾದರೆ ಬಿತ್ತನೆ ಮಾಡಲು ವಿಳಂಬವಾಗುತ್ತದೆ. ಸಂಬಂಧಪಟ್ಟ ಇಲಾಖೆಗಳಿಂದ ರಿಯಾಯಿತಿ ದರದಲ್ಲಿ ಹೆಚ್ಚು ಸಲಕರಣೆಗಳನ್ನು ಓದಗಿಸಿದರೆ ಅನುಕೂಲವಾಗುತ್ತದೆ ಎಂದರು.

ಕೃಷಿ ಪರಿಕರ ವಿತರಿಸಿ: ರೈತ ಸತೀಶ್‌ ಮಾತನಾಡಿ ಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿದೆ ಸರ್ಕಾರ ರೈತರಿಗೆ ಕೃಷಿಗೆ ಸಂಬಂಧಪಟ್ಟ ಕೃಷಿ ಬಿತ್ತನೆ ಬೀಜ ಹಾಗೂ ಅದಕ್ಕೆ ಬೇಕಾಗುವ ಸಲಕರಣಗಳನ್ನು ಒದಗಿಸಿದರೆ ತುಂಬಾ ಅನುಕೂಲವಾಗುತ್ತದೆ. ತಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಈ ಸಂದರ್ಭದಲ್ಲಿ ರೈತರನ್ನು ಸುಖಾಸುಮ್ಮನೆ ಕಚೇರಿಗೆ ಅಲೆಸಬಾರದು ಎಂದರು.

ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಕ್ರಮ: ಮನು
ತಾಲೂಕಿನ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ ರೈತರಿಗೆ ಬೇಕಾದ ಸಲಕರಣೆಗಳು, ರಸಗೊಬ್ಬರ, ಬಿತ್ತನೆ ಬೀಜಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ತಾಲೂಕಿನಲ್ಲಿ ರಸಗೊಬ್ಬರ ಕೊರತೆ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಹೋಬಳಿ ಕೇಂದ್ರಗಳಲ್ಲಿ ಯೇ ದಾಸ್ತಾನು ಮಾಡಿಕೊಂಡು ವಿತರಿಸಲು ಕ್ರಮ ಕೈಗೊಂಡಿದೆ.

ರಿಯಾಯ್ತಿ ದರದಲ್ಲಿ ಎಲ್ಲ ರೈತ ಸಂಪರ್ಕ ಕೇಂದ್ರಗಳಾದ ಕಸಬಾ, ಪಾಳ್ಯ,ಕೆ. ಹೊಸಕೋಟೆ ಹಾಗೂ ಕುಂದೂರು ಹೋಬಳಿಗಳಲ್ಲಿ ಬಿತ್ತನೆ ಬೀಜಗಳಾದ ಮುಸುಕಿನ ಜೋಳ, ಭತ್ತ, ಲಘು ಪೋಷಕಾಂಶ ಅದಕ್ಕೆ ಬೇಕಾದಂತಹ ಕೀಟನಾಶಕ ಔಷಧಿ, ರಿಯಾಯಿತಿ ದರದಲ್ಲಿ ಬ್ಯಾಟರಿ ಚಾಲಿತ ಔಷಧಿ ಕ್ಯಾನ್‌ಗಳು ದಾಸ್ತಾನು ಮಾಡಿದ್ದು, ರೈತರು ಇದರ ಸೌಲಭ್ಯವನ್ನು ಪಡೆಯಲು ಅರ್ಜಿ ಜೊತೆ ಪಹಣಿ, ಕಂದಾಯ ರಶೀದಿ, 20 ರೂ.ಚಾಪ ಕಾಗದ ಸೇರಿದಂತೆ ಸಂಬಂಧಪಟ್ಟ ದಾಖಲೆಗಳನ್ನು ಕೃಷಿ ಇಲಾಖೆಗೆ ನೀಡಿ ಪಡೆದುಕೊಳ್ಳ ಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮನು ಎಂ.ಡಿ.ತಿಳಿಸಿದ್ದಾರೆ.

ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next