Advertisement

STARS ಎಫೆಕ್ಟ್

11:50 AM Jul 04, 2018 | |

“ದಿ ವಿಲನ್‌’, “ಅಂಬಿ ನಿಂಗೆ ವಯಸ್ಸಾಯ್ತೋ’, “ಕುರುಕ್ಷೇತ್ರ’ ….. ನೀವು ಒಮ್ಮೆ ಆಗಸ್ಟ್‌ನತ್ತ ಕಣ್ಣು ನೆಟ್ಟರೆ ಈ ಮೂರು ಸಿನಿಮಾಗಳು ನಿಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಅದಕ್ಕೆ ಕಾರಣ ಈ ಸಿನಿಮಾಗಳ ಬಿಡುಗಡೆ. ವರಮಹಾಲಕ್ಷ್ಮೀ ಹಬ್ಬದಂದು ಸಿನಿಮಾ ಬಿಡುಗಡೆ ಮಾಡಬೇಕೆಂದು “ದಿ ವಿಲನ್‌’ ತಂಡ ಇನ್ನಿಲ್ಲದಂತೆ ಕೆಲಸ ಮಾಡುತ್ತಿದೆ. ನಿರ್ದೇಶಕ ಪ್ರೇಮ್‌ ಚೆನ್ನೈ-ಬೆಂಗಳೂರು ಮಧ್ಯೆ ಓಡಾಡುತ್ತಾ “ವಿಲನ್‌’ಗೆ ಅಂತಿಮ ರೂಪ ಕೊಡುತ್ತಿದ್ದಾರೆ.

Advertisement

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿರುವ ಸಿನಿಮಾ ವಿಲನ್‌. ಇತ್ತ ಕಡೆ ಅಂಬರೀಶ್‌ ಹಾಗೂ ಸುದೀಪ್‌ ಅವರ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ಕೂಡಾ ಆಗಸ್ಟ್‌ನಲ್ಲಿ ಬರುವುದಾಗಿ ಹೇಳಿಕೊಂಡಿದೆ. ಇನ್ನು, ಕನ್ನಡ ಚಿತ್ರರಂಗದ ಅದ್ಧೂರಿ ಹಾಗೂ ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರ ಕೂಡಾ ಆಗಸ್ಟ್‌ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

ಇದಲ್ಲದೇ, ಇನ್ನೂ ಒಂದಷ್ಟು ನಿರೀಕ್ಷಿತ ಚಿತ್ರಗಳು ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಬರಲು ಪ್ಲ್ರಾನ್‌ ಮಾಡಿಕೊಂಡಿವೆ. ಒಂದರ್ಥದಲ್ಲಿ ಅದು ಸಿನಿಹಬ್ಬ ಎಂದರೆ ತಪ್ಪಲ್ಲ. ಆರು ತಿಂಗಳು ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗಿದ್ದು ಕಡಿಮೆ. ಆದರೆ, ಮುಂದಿನ ಆರು ತಿಂಗಳು ಸ್ಟಾರ್‌ಗಳು ಫೀಲ್ಡ್‌ಗೆ ಇಳಿಯುತ್ತಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಎಫೆಕ್ಟ್ ಈಗಿನಿಂದಲೇ ಶುರುವಾಗಿದೆ.

ಅದು ಹೊಸಬರ ಮೇಲೆ. ಕಳೆದ ವಾರದಿಂದಲೇ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬಿಡುಗಡೆಯ ಆ ಭರಾಟೆ ಈ ವಾರವೂ ಮುಂದುವರೆದಿದ್ದು, ಆಗಸ್ಟ್‌ ಎರಡನೇ ವಾರದವರೆಗೆ ಮುಂದುವರೆಯುವ ಸಾಧ್ಯತೆ ಇದೆ. ಸ್ಟಾರ್‌ಗಳ ಸಿನಿಮಾ ಬಿಡುಗಡೆಯಾದರೆ ಮುಂದೆ ಥಿಯೇಟರ್‌ ಸಿಗೋದಿಲ್ಲ ಎಂಬುದು ಒಂದು ಸಮಸ್ಯೆಯಾದರೆ, ಸ್ಟಾರ್‌ಗಳ ಅಬ್ಬರದ ಮಧ್ಯೆ ಕಳೆದು ಹೋಗುತ್ತೇವೆ ಎಂಬ ಭಯ ಮತ್ತೂಂದು ಕಡೆ.

ಈ ಕಾರಣದಿಂದಲೇ ಸಾಲು ಸಾಲು ಹೊಸಬರ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ವಾರ ವಾರ ಕಲರ್‌ಫ‌ುಲ್‌: ನೀವು ಕಳೆದ ವಾರದಿಂದಲೇ ಸಿನಿಮಾ ಬಿಡುಗಡೆಯ ಭರಾಟೆಯನ್ನು ತೆಗೆದುಕೊಂಡರೆ ಕಳೆದ ವಾರ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ ಈ ವಾರ ಅದರ ಸಂಖ್ಯೆ ಹೆಚ್ಚಿದೆ. ಬರೋಬ್ಬರಿ 9 ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

Advertisement

“6ನೇ ಮೈಲಿ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’, “ಕುಚ್ಚಿಕು ಕುಚ್ಚಿಕು’, “ಪರಸಂಗ’, “ಧಾಂಗಡಿ’, “ಅಸತೋಮ ಸದ್ಗಮಯ’, “ಹಸಿರು ರಿಬ್ಬನ್‌’, “ವಜ್ರ’, “ಕ್ರಾಂತಿವೀರ ಮಹಾಯೋಗ’ ಚಿತ್ರಗಳು ಈ ವಾರ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದು ಈ ವಾರದ ಕಥೆಯಾದರೆ, ಜುಲೈ ಹಾಗೂ ಆಗಸ್ಟ್‌ ಎರಡನೇ ವಾರದವರೆಗೆ ಬಿಡುಗಡೆಯ ಭರಾಟೆ ಜೋರಾಗಿದೆ. “ಕರಾಳ ರಾತ್ರಿ’, “ಡಬಲ್‌ ಇಂಜಿನ್‌’, “ಟ್ರಂಕ್‌’, “ಅಥರ್ವ’ ಚಿತ್ರಗಳು ಮುಂದಿನ ವಾರ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಇದರಲ್ಲದೇ ಜುಲೈನಲ್ಲಿ “ವಾಸು ಪಕ್ಕಾ ಕಮರ್ಷಿಯಲ್‌’, “ಸಂಕಷ್ಟಹರ ಗಣಪತಿ’, “ನವೋದರ ಡೇಸ್‌’, “ಮೊಗ್ಯಾಂಬೋ’, “ಆದಿ ಪುರಾಣ’, “ಲವ್‌ ಯೂ 2′, “ಕುಮಾರಿ 21 ಎಫ್’, “ಮಟಾಶ್‌’,”ಕರ್ಷಣಂ’, “ಗೋಸಿ ಗ್ಯಾಂಗ್‌’, “ಅಂತ್ಯವಲ್ಲ ಆರಂಭ’, “ಮೂರ್ಕಲ್‌ ಎಸ್ಟೇಟ್‌’  ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಸಿನಿಮಾಗಳು ಆಗಸ್ಟ್‌ ಕೊನೆ ವಾರದ ಒಳಗೆ ಬಿಡುಗಡೆಯಾಗಲಿದೆ. 

ಸ್ಟಾರ್‌ ಧಮಕಾ: ಮೊದಲೇ ಹೇಳಿದಂತೆ ಈ ಬಿಡುಗಡೆಯ ಭರಾಟೆಗೆ ಕಾರಣ ಸ್ಟಾರ್‌ ಸಿನಿಮಾಗಳು. ವರಮಹಾಲಕ್ಷ್ಮೀ ಹಬ್ಬದಿಂದ ಸ್ಟಾರ್‌ಗಳ ಸಿನಿಮಾಗಳ ಬಿಡುಗಡೆ ಆರಂಭವಾಗಲಿದೆ. ಸಹಜವಾಗಿಯೇ ಸ್ಟಾರ್‌ ಸಿನಿಮಾ ಎಂದಾಗ ನಿರೀಕ್ಷೆ ಹೆಚ್ಚಿರುತ್ತದೆ. ಜೊತೆಗೆ ಆರು ತಿಂಗಳಿನಿಂದ ಹೆಚ್ಚೇನು ಸ್ಟಾರ್‌ಗಳ ಸಿನಿಮಾಗಳು ಕೂಡಾ ಬಿಡುಗಡೆಯಾಗಿಲ್ಲ.

ಈ ಕಾರಣದಿಂದ ಸ್ಟಾರ್‌ಗಳ ಹವಾ ಜೋರಾಗಿರುತ್ತದೆ. ಈ ಹವಾದ ಮುಂದೆ ಹೊಸಬರು ಬಂದರೆ ಕಳೆದು ಹೋಗೋದು ಗ್ಯಾರಂಟಿ. ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಅದು ಸ್ಟಾರ್‌ಗಳ ಅಬ್ಬರದ ಮುಂದೆ ಜನರಿಗೆ ತಲುಪದೇ ಹೋಗಬಹುದು, ಜೊತೆಗೆ ಸ್ಟಾರ್‌ ಸಿನಿಮಾಗಳು 300ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡು ಮುಂದುವರೆಯುವುದರಿಂದ ಚಿತ್ರಮಂದಿರಗಳ ಕೊರತೆ ಕೂಡಾ ಕಾಡುತ್ತದೆ.

ಅವಸರಕ್ಕೆ ಬಿದ್ದು ಬಿಡುಗಡೆ ಮಾಡಿದರೆ ಒಂದು ವಾರಕ್ಕೆ ಚಿತ್ರಮಂದಿರದಿಂದ ಎತ್ತಂಗಡಿಯಾಗಬಹುದೆಂಬ ಭಯ ಕೂಡಾ ಹೊಸಬರನ್ನು ಕಾಡುತ್ತಿದೆ.  ಈ ಎಲ್ಲಾ ಕಾರಣದಿಂದ ಸ್ಟಾರ್‌ಗಳ ಹವಾ ಶುರುವಾಗುವ ಮುನ್ನವೇ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. 

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ: 6ನೇ ಮೈಲಿ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಕುಚ್ಚಿಕು ಕುಚ್ಚಿಕು, ಪರಸಂಗ, ಧಾಂಗಡಿ, ಅಸತೋಮ ಸದ್ಗಮಯ, ಹಸಿರು ರಿಬ್ಬನ್‌, ವಜ್ರ, ಕರಾಳ ರಾತ್ರಿ, ಡಬಲ್‌ ಇಂಜಿನ್‌, ಟ್ರಂಕ್‌, ಅಥರ್ವ, ವಾಸು ಪಕ್ಕಾ ಕಮರ್ಷಿಯಲ್‌, ಸಂಕಷ್ಟಹರ ಗಣಪತಿ, ನವೋದರ ಡೇಸ್‌, ಮೊಗ್ಯಾಂಬೋ, ಆದಿ ಪುರಾಣ, ಲವ್‌ ಯೂ 2, ಕುಮಾರಿ 21 ಎಫ್, ಮಟಾಶ್‌, ಕರ್ಷಣಂ, ಗೋಸಿ ಗ್ಯಾಂಗ್‌, ಅಂತ್ಯವಲ್ಲ ಆರಂಭ, ಮೂರ್ಕಲ್‌ ಎಸ್ಟೇಟ್‌, ಲೈಫ್ ಜೊತೆಗೊಂದ್‌ ಸೆಲ್ಫಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next