Advertisement

ಸ್ಟಾರ್ ಕಾರು ಬಾರು

10:55 AM Jan 16, 2018 | |

ದರ್ಶನ್‌ ಮನೆಯ ಪಾರ್ಕಿಂಗ್‌ ಜಾಗ ಈಗಾಗಲೇ ಕಾರುಗಳಿಂದ ತುಂಬಿ ತುಳುಕುತ್ತಿದೆ. ಆಡಿ, ಜಾಗ್ವಾರ್‌, ರೇಂಜ್‌ ರೋವಾರ್‌, ಫಾರ್ಚೂನರ್‌ … ಹೀಗೆ ಅವರು ಶೇಡ್‌ನ‌ಲ್ಲಿ ವಿವಿಧ ಬಗೆಯ ಕಾರುಗಳು ಇವೆ. ಈಗ ಅದಕ್ಕೆ ಹೊಸ ಕಾರೊಂದು ಸೇರ್ಪಡೆಯಾಗಿದೆ. ಅದು ಲ್ಯಾಂಬೋರ್ಗಿನಿ. ಸಂಕ್ರಾಂತಿ ಹಬ್ಬದಂದು ದರ್ಶನ್‌ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದಾರೆ. ಈ ಮೂಲಕ ಮತ್ತೂಂದು ಕಾರಿನ ಒಡೆಯರಾಗಿದ್ದಾರೆ ದರ್ಶನ್‌. 

Advertisement

ಹಾಗೆ ನೋಡಿದರೆ ಇತ್ತೀಚಿನ ತಿಂಗಳಲ್ಲಿ ಕನ್ನಡ ಚಿತ್ರರಂಗದ ಒಂದಷ್ಟು ನಟ-ನಟಿಯರು ಹೊಸ ಕಾರಿನ ಒಡೆಯರಾಗಿದ್ದಾರೆ. ಮುಖ್ಯವಾಗಿ ಕೆಲ ತಿಂಗಳ ಹಿಂದೆ ಯಶ್‌ ಒಮ್ಮೆಲೇ ಮೂರು ಬೆಂಜ್‌ ಕಾರುಗಳನ್ನು ಖರೀದಿಸಿದ್ದರು. ತಮಗೊಂದು, ಪತ್ನಿಗೊಂದು ಹಾಗೂ ಅಪ್ಪ-ಅಮ್ಮನಿಗೊಂದು ಕಾರು ಕೊಡಿಸಿದ್ದರು. ಈ ಮೂಲಕ ಯಶ್‌ ದೊಡ್ಡ ಸುದ್ದಿಯಾಗಿದ್ದು ಸುಳ್ಳಲ್ಲ.

ನಟ ಚೇತನ್‌ ಚಂದ್ರ ಕೂಡಾ ಕೆಲ ತಿಂಗಳ ಹಿಂದೆ ಹೊಸ ಆಡಿ ಕಾರು ಖರೀದಿಸಿದ್ದಾರೆ. ಸುಮಾರು 10 ವರ್ಷಗಳಿಂದ ಚಿತ್ರರಂಗದಲ್ಲಿರುವ ಚೇತನ್‌ ಚಂದ್ರ ಕೂಡಾ ಇತ್ತೀಚೆಗೆ ಆಡಿ ಕಾರು ತಗೊಂಡಿದ್ದಾರೆ. ತಮ್ಮ ಆಡಿ  ಕೇವಲ ನಟರಷ್ಟೇ ಈ ಬಾರಿ ನಟಿಯರು ಕೂಡಾ ಹೊಸ ಕಾರು ಖರೀದಿಸಿದ್ದಾರೆ. ಮುಖ್ಯವಾಗಿ 2017ರಲ್ಲಿ ಸಖತ್‌ ಬಿಝಿಯಾಗಿದ್ದ ಹರಿಪ್ರಿಯಾ ಹೊಸ ಜಾಗ್ವಾರ್‌ ಕಾರನ್ನು ಖರೀದಿಸಿ, ಅದರಲ್ಲಿ ಲಾಂಗ್‌ ಡ್ರೈವ್‌ ಹೋಗಿ ಖುಷಿಯಾಗಿದ್ದಾರೆ.

ಜಾಗ್ವಾರ್‌ ಖರೀದಿಸಬೇಕೆಂಬುದು ಹರಿಪ್ರಿಯಾ ಅವರ ತುಂಬಾ ದಿನಗಳ ಕನಸಾಗಿತ್ತಂತೆ. ಅದನ್ನು ಕಳೆದ ವರ್ಷದ ಕೊನೆಯಲ್ಲಿ ಈಡೇರಿಸಿಕೊಂಡಿದ್ದಾರೆ. ಅದು ಬಿಟ್ಟರೆ ಒಂದು ನಟಿಯರಾದ ರಶ್ಮಿಕಾ ಆಡಿ, ಕಾರುಣ್ಯ ರಾಮ್‌ ಎಸ್‌ಯುವಿ, ಕೃತಿ ಕರಬಂದ ಕ್ರೇಟಾ ಕಾರು ಖರೀದಿಸಿದ್ದಾರೆ. ಈ ಮೂಲಕ ಹೊಸ ಹಾಗೂ ಕನಸಿನ ಕಾರು ಹೊಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next