Advertisement

ಪೋಸ್ಟರ್‌ ರಿಲೀಸ್‌ ಮಾಡಿ ʼಶ್ರೀವಲ್ಲಿʼ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ ʼPushpa 2ʼ ತಂಡ

12:11 PM Apr 05, 2024 | Team Udayavani |

ಹೈದರಾಬಾದ್: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಂದು 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬ ಆಚರಿಸಲು ಅವರು ವಿದೇಶಕ್ಕೆ ತೆರಳಿದ್ದಾರೆ.

Advertisement

ರಶ್ಮಿಕಾ ಸಾಲು ಸಾಲು ಸೌತ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರ ಬಾಲಿವುಡ್‌ ʼಅನಿಮಲ್‌ʼ ಸಿನಿಮಾ ದೊಡ್ಡ ಹಿಟ್ ಆಗಿದೆ. ಇದೀಗ ಅವರು ಬಹು ನಿರೀಕ್ಷಿತ ʼಪುಷ್ಪ-2ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಹುಟ್ಟುಹಬ್ಬದಂದು ಅವರ ಮುಂದಿನ ಸಿನಿಮಾದ ಹೊಸ ಪೋಸ್ಟರ್‌ ಗಳನ್ನು ರಿಲೀಸ್‌ ಮಾಡಲಾಗಿದೆ.  ಅಲ್ಲು ಅರ್ಜುನ್‌ ಅವರ ʼಪುಷ್ಪ-2ʼ ಚಿತ್ರತಂಡ ನಟಿ ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರದ ಪೋಸ್ಟರ್‌ ನ್ನು ರಿಲೀಸ್‌ ಮಾಡಿದ್ದಾರೆ.

ಹಸಿರು ಸೀರೆ ಉಟ್ಟುಕೊಂಡು, ಆಭರಣ ತೊಟ್ಟಿರುವ ಚೆಲುವೆಯಾಗಿ ರಶ್ಮಿಕಾ ಪೋಸ್ಟರ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೊಂದೆಡೆ ಅವರ ಮತ್ತೊಂದು ಸಿನಿಮಾ ʼದಿ ಗರ್ಲ್‌ ಫ್ರೆಂಡ್‌ʼ ಸಿನಿಮಾದ  ಫಸ್ಟ್‌ ಲುಕ್‌  ಪೋಸ್ಟರ್‌ ನ್ನು ರಿಲೀಸ್‌ ಮಾಡಲಾಗಿದೆ. ಹೆಗಲ ಮೇಲೆ ಬ್ಯಾಗ್‌ ಹಾಕಿಕೊಂಡು ಕಾಲೇಜಿನ ಕಾರಿಡಾರ್‌ ನಿಂದ ನಡೆದುಕೊಂಡು ಬರುತ್ತಿರುವ ರಶ್ಮಿಕಾ ಈ ಪೋಸ್ಟರ್‌ ನಲ್ಲಿ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ.

Advertisement

ಹೊಸ ಪೋಸ್ಟರ್‌ ಮೂಲಕ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಲಾಗಿದೆ.

ಈ ಸಿನಿಮಾವನ್ನು ರಾಹುಲ್ ರವೀಂದ್ರನ್ ಅವರು ನಿರ್ದೇಶನ ಮಾಡಲಿದ್ದಾರೆ. ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next