Advertisement

Ayodhya ರಾಮನವಮಿ ಹಿನ್ನೆಲೆ: ರಾಮಮಂದಿರದಲ್ಲಿ ವಿಐಪಿ ದರ್ಶನ ರದ್ದು

01:21 AM Apr 16, 2024 | Team Udayavani |

ಅಯೋಧ್ಯೆ: ರಾಮನವಮಿ ಪ್ರಯುಕ್ತ ಅಯೋಧ್ಯೆಯ ಬಾಲಕ ರಾಮನ ದರ್ಶನಕ್ಕೆ ಜನಸಾಗ ರವೇ ಹರಿದು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಐಪಿ ದರ್ಶನ ರದ್ದುಗೊಳಿಸಲಾಗಿದೆ. ಎ.15ರಿಂದ 18ರ ವರೆಗೆ ವಿಐಪಿ ದರ್ಶನ ವ್ಯವಸ್ಥೆ ಇರುವುದಿಲ್ಲ, ಈ ಅವಧಿಯಲ್ಲಿ ಭಕ್ತರು ಕಾಯ್ದಿರಿಸಿದ್ದ ವಿಐಪಿ ಟಿಕೆಟ್‌ಗಳನ್ನು ರದ್ದು ಮಾಡಲಾಗಿದೆ ಎಂದು ಅಯೋಧ್ಯಾ ರಾಮಮಂದಿರ ಟ್ರಸ್ಟ್‌ ಸೋಮವಾರ ಮಾಹಿತಿ ನೀಡಿದೆ.

Advertisement

ಎ.17ರ ಬುಧವಾರದಂದು ರಾಮನವಮಿ ಅಂಗವಾಗಿ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಭಕ್ತರು ದೇವಾಲಯಕ್ಕೆ ಆಗಮಿಸುವ ಸಾಧ್ಯತೆ ಹಿನ್ನಲೆಯಲ್ಲಿ ಟ್ರಸ್ಟ್‌ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಗತ್ಯ ಎನಿಸಿದರೆ, ದರ್ಶನ ವ್ಯವಸ್ಥೆಯನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್‌ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next