Advertisement

2022ರ ಏಷ್ಯಾ ಕಪ್‌ ಕ್ರಿಕೆಟ್‌ನಿಂದ ಶಾಹೀನ್‌ ಶಾ ಅಫ್ರಿದಿ ಔಟ್‌

10:55 PM Aug 20, 2022 | Team Udayavani |

ಲಾಹೋರ್‌: ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆರಂಭಕ್ಕೂ ಮೊದಲೇ ಪಾಕಿಸ್ಥಾನಕ್ಕೆ ಬಲವಾದ ಆಘಾತ ಎದುರಾಗಿದೆ.

Advertisement

ಪಾಕಿಸ್ತಾನ ತಂಡದ ಪ್ರಧಾನ ವೇಗಿ ಶಾಹೀನ್‌ ಶಾ ಅಫ್ರಿದಿ ಮಂಡಿನೋವಿನಿಂದಾಗಿ ಮುಂಬರುವ 2022ರ ಏಷ್ಯಾ ಕಪ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಆ ಮೂಲಕ ಆಗಸ್ಟ್‌ 28 ರಂದು ಭಾರತದ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಪಾಕಿಸ್ತಾನ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.

ಆಗಸ್ಟ್‌ 27 ರಿಂದ ಯುಎಇ ಆತಿಥ್ಯದಲ್ಲಿ 2022ರ ಏಷ್ಯಾ ಕಪ್‌ ಟೂರ್ನಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next