Advertisement

16,347 ಕೋ ಬಿಡ್‌: ಸ್ಟಾರ್‌ ಇಂಡಿಯಾಗೆ ಐಪಿಎಲ್‌ ಮಾಧ್ಯಮ ಹಕ್ಕು

03:29 PM Sep 04, 2017 | Team Udayavani |

ಹೊಸದಿಲ್ಲಿ : ಇಂದು ನಡೆದಿರುವ ಹರಾಜಿನಲ್ಲಿ  ಐಪಿಎಲ್‌ ಮಾಧ್ಯಮ ಹಕ್ಕನ್ನು  ಮುಂದಿನ ಐದು ವರ್ಷಗಳ ಅವಧಿಗಾಗಿ 1,6,347.50 ಕೋಟಿ ರೂ.ಗಳ ಗರಿಷ್ಠ ಬಿಡ್ಡರ್‌ ಸ್ಟಾರ್‌ ಇಂಡಿಯಾ ಗೆದ್ದುಕೊಂಡಿದೆ. 

Advertisement

ಸೋನಿ ಸಂಸ್ಥೆ 11,050 ಕೋಟಿ ರೂ.ಗಳ ಬಿಡ್ಡಿಂಗ್‌ ಮಾಡಿತ್ತು.

ಸ್ಟಾರ್‌ ಇಂಡಿಯಾ ಡಿಜಿಟಲ್‌ ಮತ್ತು ಜಾಗತಿಕ ಹಕ್ಕುಗಳನ್ನು ಕೂಡ ಪಡೆದಿರುವುದು ಗಮನಾರ್ಹವಾಗಿದೆ. ಫೇಸ್‌ ಬುಕ್‌, ಅಮಝಾನ್‌, ಯಾಹೂ, ರಿಲಯನ್ಸ್‌ ಜಿಯೋ, ಸ್ಟಾರ್‌ ಇಂಡಿಯಾ, ಸೋನಿ ಪಿಕ್ಚರ್‌ಸ್‌, ಡಿಸ್ಕವರಿ,ಸ್ಕೈ, ಬ್ರಿಟಿಷ್‌ ಟೆಲಿವಿಷನ್‌ ಮತ್ತು ಇಎಸ್‌ಪಿಎನ್‌ ಸೇರಿದಂತೆ 24 ಕಂಪನಿಗಳು ಹರಾಜಿನಲ್ಲಿ ಭಾಗವಹಿಸಿದ್ದವು. 

ಐಪಿಎಲ್‌ನ ಟೈಟಲ್‌ ಪ್ರವರ್ತಕರಾಗಿರುವ ವಿವೋ, 2018-22ರ, ಸುಮಾರು 341 ಮಿಲಿಯ ಡಾಲರ್‌ಗಳ, ಪ್ರವರ್ತನ ಹಕ್ಕನ್ನು ಉಳಿಸಿಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next