Advertisement

ಮೊದಲ ಸುತ್ತಿನಲ್ಲೇ ಸೋತ ಸ್ಟಾನಿಸ್ಲಾಸ್‌ ವಾವ್ರಿಂಕ

09:52 AM Aug 02, 2018 | |

ವಾಷಿಂಗ್ಟನ್‌: ಮೂರು ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಸ್ಟಾನಿಸ್ಲಾಸ್‌ ವಾವ್ರಿಂಕ ವಾಷಿಂಗ್ಟನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲುಂಡು ಹೊರಬಿದ್ದಿದ್ದಾರೆ. ಮಂಗಳವಾರ ರಾತ್ರಿಯ ಪಂದ್ಯದಲ್ಲಿ ಅಮೆರಿಕದ ಅರ್ಹತಾ ಆಟಗಾರ ಡೊನಾಲ್ಡ್‌ ಯಂಗ್‌ ಭಾರೀ ಹೋರಾಟದ ಬಳಿಕ 6-4, 6-7 (5-7), 7-6 (7-3) ಅಂತರದಿಂದ ಸ್ವಿಸ್‌ ಆಟಗಾರನಿಗೆ ಸೋಲುಣಿಸಿದರು.

Advertisement

ವಾವ್ರಿಂಕ ಕಳೆದ ಕೆಲವು ವಾರಗಳಿಂದ ಮಂಡಿ ನೋವಿನಿಂದ ವಿಶ್ರಾಂತಿ ಪಡೆಯುತ್ತಿದ್ದರು. ಇದು ಅವರ ಪುನರಾಗಮನ ಪಂದ್ಯವಾಗಿತ್ತು. 234ನೇ ರ್‍ಯಾಂಕಿಂಗ್‌ ಆಟಗಾರ ಯಂಗ್‌ 2ನೇ ಸುತ್ತಿನಲ್ಲಿ ಜಪಾನಿನ ಕೀ ನಿಶಿಕೊರಿ ವಿರುದ್ಧ ಆಡಲಿದ್ದಾರೆ. ವನಿತಾ ಸಿಂಗಲ್ಸ್‌ನಲ್ಲಿ ಅಮೆರಿಕನ್‌ ಓಪನ್‌ ಚಾಂಪಿಯನ್‌ ಸ್ಲೋನ್‌ ಸ್ಟೀಫ‌ನ್ಸ್‌ ತಮ್ಮದೇ ನಾಡಿನ ಬೆಥನಿ ಮಾಟೆಕ್‌ ಸ್ಯಾಂಡ್ಸ್‌ ವಿರುದ್ಧ 7-5, 6-4 ಅಂತರದ ಜಯ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next