Advertisement

ಸ್ಟಾನ್‌ಫೋರ್ಡ್‌ ಟೆನಿಸ್‌ ಮರಿಯಾ ಶರಪೋವಾ ಗೆಲುವು

08:10 AM Aug 02, 2017 | Team Udayavani |

ಲಾಸ್‌ ಏಂಜಲೀಸ್‌: ಮಾಜಿ ನಂ.1 ಟೆನಿಸ್‌ ತಾರೆ, 5 ಬಾರಿ ಗ್ರ್ಯಾನ್‌ಸ್ಲಾಮ್‌ ವಿಜೇತ ಆಟಗಾರ್ತಿ ಮರಿಯಾ ಶರಪೋವಾ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ಸ್ಟಾನ್‌ಫೋರ್ಡ್‌ ಟೆನಿಸ್‌ ಟೂರ್ನಿಯ 1ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ.
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಶರಪೋವಾ 6-1, 4-6, 6-0 ಅಂತರದಿಂದ ಅಮೆರಿಕದ ವಿಶ್ವದ 80ನೇ ರ್‍ಯಾಂಕಿಂಗ್‌ನ ಜೆನ್ನಿಫ‌ರ್‌ ಬ್ರಾಡಿ ವಿರುದ್ಧ ಗೆಲುವು ಸಾಧಿಸಿದರು. ಉದ್ದೀಪನ ಸೇವನೆ ಪ್ರಕರಣದ ಹಿನ್ನೆಲೆಯಲ್ಲಿ ಶರಪೋವಾ 15 ತಿಂಗಳು ನಿಷೇಧಕ್ಕೆ ತುತ್ತಾಗಿದ್ದರು. ನಿಷೇಧದ ಅವಧಿ ಮುಗಿದ ಮೇಲೆ ಕಳೆದ ಎಪ್ರಿಲ್‌ನಲ್ಲಿ ಅಂತಾರಾಷ್ಟ್ರೀಯ ಟೆನಿಸ್‌ಗೆ ಮರಳಿದ್ದರು. ಪ್ರಸ್ತುತ 171ನೇ ರ್‍ಯಾಂಕಿಂಗ್‌ ಹೊಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next