Advertisement
ಹೌದು. ಒಂದೆರಡು ವರ್ಷಗಳ ಹಿಂದೆ ಒಡಿಸ್ಸಾದಲ್ಲಿ ವ್ಯಕ್ತಿಯೊಬ್ಬ ಹಣವಿಲ್ಲದೆ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದರೆ, ತುಮಕೂರಿನಲ್ಲಿ ಮೊಪೆಡ್(ದ್ವೀಚಕ್ರ ವಾಹನ)ನಲ್ಲಿ ಮಗಳ ಮೃತ ದೇಹವನ್ನು ಸಾಗಿಸಿದ ಹೃದಯ ವಿದ್ರಾವಕ ಘಟನೆಗಳು ಆಳುವ ಸರಕಾರಗಳ ಕಣ್ಣು ತೆರೆಸಿದ್ದವು. ಅದರ ಫಲವಾಗಿಯೇ ಈ ಹಿಂದಿನ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಶ್ರದ್ಧಾಂಜಲಿ ವಾಹನಕ್ಕೆ ಚಾಲನೆ ನೀಡಿತ್ತು. ಮೊದಲ ಹಂತದಲ್ಲಿ ರಾಜ್ಯದ 30 ಜಿಲ್ಲಾ ಕೇಂದ್ರಗಳಿಗೆ ತಲಾ ಒಂದು ವಾಹನವನ್ನು ಒದಗಿಸಿತ್ತು.
Related Articles
Advertisement
ಅಧಿಕಾರಿಗಳಿಗೇ ಮಾಹಿತಿಯಿಲ್ಲ?: ಈ ಕುರಿತು ಮಾಹಿಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಎಂ.ಎಸ್. ಹೊನಕೇರಿ ಅವರನ್ನು ಸಂಪರ್ಕಿಸಿದರೆ, ಇದು ನಮಗೆ ಸಂಬಂಧಿವಿಲ್ಲ. ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸೆರನ್ನೇ ಕೇಳಬೇಕು ಎಂದು ಜಾರಿಕೊಳ್ಳುತ್ತಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಿ.ಎಸ್.ಪಲ್ಲೇದ, ಜಿಲ್ಲಾಸ್ಪತ್ರೆ ಆವರಣದಲ್ಲಿ ‘ಶ್ರದ್ಧಾಂಜಲಿ’ ವಾಹನ ನಿಲುಗಡೆ, ಅಗತ್ಯವಿದ್ದವರೆ ಸೇವೆ ಒದಗಿಸುವಂತೆ ವೈದ್ಯರಿಂದ ಪ್ರಮಾಣ ಪತ್ರ ಕೊಡಿಸುವುದಷ್ಟೇ ನಮ್ಮ ಕೆಲಸ. ವಾಹನ ನಿರ್ವಹಣೆ, ಇಂಧನ ಎಲ್ಲವೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈ ವರೆಗೆ ಡಿಎಚ್‌ಒ ಕಚೇರಿಯಿಂದಲೇ ನಿರ್ವಹಣೆಯಾಗಿದೆ. ಇತ್ತೀಚೆಗಷ್ಟೇ ಶ್ರದ್ಧಾಂಜಲಿ ವಾಹನದ ಚಾಲಕನನ್ನೂ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿದ್ದಾರೆ ಎಂದು ತಿಳಿಸಿದರು.
ಸರಕಾರದಲ್ಲಿ ಅನುದಾನ ಕೊರತೆಯೋ, ಅಧಿಕಾರಿಗಳ ನಡುವಿನ ಸಂಪರ್ಕದ ಸಮಸ್ಯೆಯೋ ಗೊತ್ತಿಲ್ಲವಾದರೂ ಬಡವರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ‘ಶ್ರದ್ಧಾಂಜಲಿ’ ಸೇವೆ ಜಿಲ್ಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಹಂತಕ್ಕೆ ತಲುಪಿರುವುದು ಸುಳ್ಳಲ್ಲ.
ಆಸ್ಪತ್ರೆಗಳಿಂದ ಮನೆಗಳಿಗೆ ಶವ ಸಾಗಿಸಲು ಖಾಸಗಿ ವಾಹನದಾರರು ಮುಂದೆ ಬರುವುದಿಲ್ಲ. ಬಂದವರೂ ಮನಸ್ಸಿಗೆ ಬಂದಷ್ಟು ಹಣ ಕೇಳುತ್ತಾರೆ. ಹೀಗಾಗಿ ‘ಶ್ರದ್ಧಾಂಜಲಿ’ ವಾಹನದಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ಹೀಗಾಗಿ ಆದಷ್ಟು ಬೇಗ ದುರಸ್ತಿಗೊಳಿಸುವುದರೊಂದಿಗೆ ಹೆಚ್ಚುವರಿಯಾಗಿ ನಾಲ್ಕೈದು ವಾಹನಗಳನ್ನು ಒದಗಿಸಿದರೆ ಒಳ್ಳೆಯದು.. ಮುತ್ತಣ್ಣ ಭರಡಿ, ಸಾಮಾಜಿಕ ಕಾರ್ಯಕರ್ತ ವೀರೇಂದ್ರ ನಾಗಲದಿನ್ನಿ