ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್‌ಜಿವಿ) ಅವರ ಗರಡಿಯಲ್ಲಿ ಸುಮಾರು ಐದಾರು ವರ್ಷಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಯುವ ಪ್ರತಿಭೆ ಕಿಶೋರ್ ಭಾರ್ಗವ್ ನಿರ್ದೇಶನದಲ್ಲಿ “ಸ್ಟಾಕರ್’ ಎಂಬ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ.
ಇತ್ತೀಚೆಗಷ್ಟೇ “ಸ್ಟಾಕರ್’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರತಂಡ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ “ಸ್ಟಾಕರ್’ ಚಿತ್ರದಲ್ಲಿ ತೆಲುಗು ಮೂಲದ ರಾಮ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸುಮನ್ ನಗರ್‌ಕರ್, ಐಶ್ವರ್ಯಾ ನಂಬಿಯರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿ ಶಂಕರ್ ದೇಸಾಯಿ ಮುಂತಾದವರು “ಸ್ಟಾಕರ್’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“ಎಸ್‌ಎಂಎಲ್ ಪ್ರೊಡಕ್ಷನ್ಸ್’ ಮತ್ತು ” ಸ್ಕ್ರಿಪ್ಟ್ ಟೀಸ್ ಫಿಲಂಸ್’ ಬ್ಯಾನರ್‌ನಡಿ ಎಂ.ಎನ್.ವಿ ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ಜಂಟಿಯಾಗಿ “ಸ್ಟಾಕರ್’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
ಇದನ್ನೂ ಓದಿ:ಮೊದಲ ಡೋಸ್ 100 % !: ದೇಶದ ಮೊದಲ ರಾಜ್ಯ ಕರ್ನಾಟಕ
ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಸ್ಟಾಕರ್’ ಚಿತ್ರಕ್ಕೆ ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ಚಿತ್ರಕ್ಕೆ ವಿನೋದ್ ರಾಜ್ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಸ್ಕಂದ ಕಶ್ಯಪ್ ಸಂಗೀತ ಸಂಯೋಜನೆಯಿದೆ. ಸದ್ಯ “ಸ್ಟಾಕರ್’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿರುವ ಚಿತ್ರತಂಡ, ಚಿತ್ರದ ಬಿಡುಗಡೆಗೆ ತಯಾರಿ ಶುರು ಮಾಡಿದೆ