Advertisement

ಕರುಣಾನಿಧಿ 95: ಸ್ಟಾಲಿನ್‌ಪುತ್ರನಿಂದ 7 ಕಡೆ ಪಕ್ಷದ ಧ್ವಜಾರೋಹಣ

06:09 PM Jul 13, 2018 | Team Udayavani |

ಚೆನ್ನೈ : ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್‌ ಅವರ ಪುತ್ರ ಉದಯನಿಧಿ ಅವರು ಇದೇ ಜುಲೈ 15ರಂದು ರಾಜ್ಯದ ಏಳು ಕಡೆಗಳಲ್ಲಿ ಪಕ್ಷದ ಧ್ವಜವನ್ನು ಹಾರಿಸಲಿದ್ದು ಇದು ಡಿಎಂಕೆ ಇತಿಹಾಸದಲ್ಲೆ ಪ್ರಥಮ ಎನಿಸಲಿದೆ.

Advertisement

ಅಂದ ಹಾಗೆ ಸ್ಟಾಲಿನ್‌ ಪುತ್ರ ಉದಯನಿಧಿ ಅವರು ಡಿಎಂಕೆ ಯಲ್ಲಿ ಯಾವುದೇ ಹುದ್ದೆಯನ್ನು ಹೊಂದಿಲ್ಲ. ಆದರೂ ಪಕ್ಷದ ಮುಖ್ಯಸ್ಥನ ಮಗನಾಗಿರುವ ಕಾರಣಕ್ಕೆ ಅವರಿಗೆ ಈ ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂಬ ಟೀಕೆಗಳು ಕೇಳಿ ಬಂದಿವೆ.

ಉದಯನಿಧಿ ಅವರು ನಮ್ಮ ಆಡಳಿತ ನಿರ್ದೇಶಕರಾಗಿದ್ದು ತಮಿಳು ಸಿನೇಮಾ ನಟ ಹಾಗೂ ನಿರ್ಮಾಪಕರೂ ಆಗಿದ್ದಾರೆ. ಡಿಎಂಕೆಯ ಕಾಂಚೀಪುರಂ ಪಶ್ಚಿಮ ವ್ಯಾಪ್ತಿ ಪ್ರದೇಶದಲ್ಲಿ ಅವರು ಏಳು ಕಡೆಗಳಲ್ಲಿ ಪಕ್ಷದ ಧ್ವಜವನ್ನು ಹಾರಿಸಲಿದ್ದಾರೆ. ಪಕ್ಷದ ಮುಖ್ಯಸ್ಥ ಎಂ ಕರುಣಾನಿಧಿ ಅವರ 95ನೇ ಹುಟ್ಟುಹಬ್ಬದ ಪ್ರಯಕ್ತ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಡಿಎಂಕೆ ಮುಖವಾಣಿ ಮುರಸೋಳಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next