Advertisement

7 sharpshooters ಬಂಧನ; ಬಾಬಾ ಸಿದ್ಧಿಕಿ ಹ*ತ್ಯೆ, ಸಲ್ಮಾನ್‌ ಮನೆಗೆ ಫೈರಿಂಗ್‌ ಆರೋಪ

01:33 AM Oct 26, 2024 | Team Udayavani |

ಮುಂಬಯಿ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆ ಮತ್ತು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಿವಾ­ಸದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಶಂಕಿಸ­ಲಾಗಿರುವ 7 ಮಂದಿ ಶಾರ್ಪ್‌ಶೂಟರ್‌ಗಳನ್ನು ಬಂಧಿಸಲಾಗಿದೆ. ಪಂಜಾಬ್‌, ಹರಿಯಾಣ, ರಾಜಸ್ಥಾನ ಮತ್ತು ದಿಲ್ಲಿ ರಾಜ್ಯಗಳಲ್ಲಿ ಗುರುವಾರ ಮತ್ತು ಶುಕ್ರವಾರ ಪೊಲೀಸರು ನಡೆಸಿದ ಕಾರ್ಯಾಚರ­ಣೆಯಲ್ಲಿ ಅವರನ್ನು ಬಂಧಿಸಲಾಗಿದೆ. ಅವರೆಲ್ಲರೂ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಜತೆಗೆ ಲಿಂಕ್‌ ಇದ್ದವರು ಎಂದು ಹೇಳಲಾಗುತ್ತಿದೆ. ದಿಲ್ಲಿ ಪೊಲೀಸ್‌ ಇಲಾಖೆ ಈ ಕಾರ್ಯಾಚರಣೆ ನಡೆಸಿದ್ದು, ಅವರಿಂದ ಶಸ್ತ್ರಾಸ್ತ್ರ, ವಶಪಡಿಸಿಕೊಳ್ಳಲಾಗಿದೆ.

Advertisement

ಸಿದ್ಧಿಕಿ ಹ*ತ್ಯೆಗೆ ಪಾಕ್‌ ಡ್ರೋನ್‌ನಿಂದ ಶಸ್ತ್ರಾಸ್ತ್ರ?
ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆಗೆ ಪಾಕಿಸ್ಥಾನ ದಿಂದ ಡ್ರೋನ್‌ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗಿದೆ. ಈ ಬಗ್ಗೆ ಮುಂಬಯಿ ಪೊಲೀ ಸರ ತನಿಖೆಯಿಂದ ಮಾಹಿತಿ ದೃಢಪಟ್ಟಿದೆ. ಅ.12­ರಂದು ನಡೆದಿದ್ದ ಅವರ ಹತ್ಯೆ ಪ್ರಕರಣ ದಲ್ಲಿ ಒಟ್ಟು 4 ಗನ್‌ಗಳನ್ನು ಬಳಕೆ ಮಾಡಲಾಗಿತ್ತು ಎಂಬ ವಿಚಾರವೂ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next