ಚೆನ್ನೈ : ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರ ಮೇಲೆ ದಾಳಿ ನಡೆಸಸಿದ ಹಿನ್ನೆಲೆ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಜುಲೈ 28 ರಂದು, 10 ಕೊಡೈಕೆರೈ ಮೀನುಗಾರರು ಮೀನುಗಾರಿಕೆಯ ಉದ್ದೇಶದಿಂದ ಸಮುದ್ರಕ್ಕೆ ತೆರಳಿದ್ದು ಶ್ರೀಲಂಕಾ ನೌಕಾಪಡೆ ತಮಿಳುನಾಡಿನ ಮೀನುಗಾರರ ಮೇಲೆ ದಾಳಿ ನಡೆಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಶಾಶ್ವತ ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸ್ಟ್ಯಾಲಿನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಮಹಿಳೆ ಮೇಲೆ ಗಂಡ ಸೇರಿದಂತೆ ಐವರಿಂದ ಹಲ್ಲೆ: ಸಿ ಎಸ್ ಪುರ ಪೋಲಿಸರಿಂದ 5 ಜನರ ಬಂಧನ
ಆಗಸ್ಟ್ 1 ರಂದು, ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಸಮುದ್ರದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಮೀನುಗಾರರಾದ ಕಲೈಸೇಲ್ವನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಮತ್ತು ಅವರನ್ನು ನಾಗಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಕೂಡ ಪತ್ರದಲ್ಲಿ ಹೇಳಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು, ಶ್ರೀಲಂಕಾ ನೌಕಾಪಡೆಯವರು ಯಾವುದೇ ವಿದೇಶಿ ನೀತಿ ನಿಯಮಗಳನ್ನು ಪಾಲಿಸುತ್ತಿಲ್ಲ. ಅವ್ಯಾಹತವಾಗಿ ರಾಜ್ಯದ ಮೀನುಗಾರ ಸಮುದಾಯದವರ ಮೇಲೆ ದಾಳಿ ಮಾಡುತ್ತಿರುವುದನ್ನು ನೋಡಿ ಸುಮ್ಮನೆ ಇರುವುದಕ್ಕೆ ಸಾಧ್ಯವಿಲ್ಲ. ಇದಕ್ಕೊಂದು ಶಾಶ್ವತ ಅಂತ್ಯ ಹಾಡಬೇಕಾಗಿದೆ.
ಈ ಘಟನೆ ತಮಿಳುನಾಡಿನ ಮೀನುಗಾರರ ಸಮುದಾಯದವರ ನಿದ್ದೆಗೆಡಿಸಿದ್ದು, ನಮ್ಮ ನೆರೆಯ ದೇಶ ವಿದೇಶಿ ನೀತಿಗಳನ್ನು ಪಾಲಿಸುತ್ತಿಲ್ಲ ಎನ್ನುವುದನ್ನು ನಾವು ಎಚ್ಚರಿಸುವುದು ನಮ್ಮ ಕರ್ತವ್ಯವಾಗಿದೆ. ಕೇಂದ್ರ ಸರ್ಕಾರ ಈ ಸಮಸ್ಯಗೆ ಶಾಶ್ವತ ಅಂತ್ಯ ಪರಿಹಾರ ಒದಗಿಸಿಕೊಡಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ : ಮನೆ ಮಾರಾಟಕ್ಕೆ ಒಪ್ಪುದ ಮಹಿಳೆ : ಗಂಡ ಸೇರಿ ಐವರಿಂದ ಹಲ್ಲೆ ; ಆರೋಪಿಗಳು ಪೋಲೀಸರ ವಶಕ್ಕೆ