Advertisement

ಆಳ್ವಾಸ್‌ ಮಲ್ಲಕಂಬ ತಂಡಕ್ಕೆ ಸಮಗ್ರ ಪ್ರಶಸ್ತಿ :  ರಾಜ್ಯ ಮಟ್ಟದ ಮಲ್ಲಕಂಬ ಚಾಂಪಿಯನ್‌ಶಿಪ್‌

10:52 PM Sep 25, 2021 | Team Udayavani |

ಮೂಡುಬಿದಿರೆ : ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಮಲ್ಲಕಂಬ ತಂಡವು ಕರ್ನಾಟಕ ಮಲ್ಲಕಂಬ ಅಸೋಸಿಯೇಶನ್‌, ಗದಗದ ಶ್ರೀಮತಿ ಕಮಲ ಆ್ಯಂಡ್‌ ಶ್ರೀ ವೆಂಕಪ್ಪ ಮಗದಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮಲ್ಲಕಂಬ ಚಾಂಪಿಯನ್‌ಶಿಪ್‌ನಲ್ಲಿ 18 ಸ್ಥಾನಗಳನ್ನು ಗಳಿಸಿ, ಸತತ ನಾಲ್ಕನೇ ಬಾರಿಗೆ ಸಮಗ್ರ ತಂಡವಾಗಿ ಹೊರಹೊಮ್ಮಿದ್ದು ಆಳ್ವಾಸ್‌ನ 18 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 5 ಮಂದಿ ಪ್ರಥಮ, 3 ಮಂದಿ ದ್ವಿತೀಯ, 3 ಮಂದಿ ತೃತೀಯ, 4 ಮಂದಿ ಚತುರ್ಥ, ಒಬ್ಬರು ಐದನೇ ಸ್ಥಾನ, ಇಬ್ಬರು ಆರನೇ ಸ್ಥಾನ ಗಳಿಸಿದ್ದಾರೆ.

Advertisement

ಇವರಲ್ಲಿ 13 ಬಾಲಕರು, ಐವರು ಬಾಲಕಿಯರು ರಾಷ್ಟ್ರೀಯ ಮಲ್ಲಕಂಬ ಫೆಡರೇಶನ್‌ ಆಯೋಜನೆಯಲ್ಲಿ ಮಧ್ಯಪ್ರದೇಶದ ಮಾಧವ್‌ ನ್ಯಾಸ್‌ಉಜ್ಜೆನಿಯಲ್ಲಿ ಸೆ. 26ರಿಂದ 30ರ ವರೆಗೆ ನಡೆಯಲಿರುವ ಮಲ್ಲಕಂಬ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ.

12 ವರ್ಷದ ಕೆಳಗಿನ ಬಾಲಕರ ವಿಭಾಗದಲ್ಲಿ ಆಕಾಶ್‌ -ಪ್ರಥಮ ಸ್ಥಾನ, ಬಸವರಾಜ್‌ 4ನೇ, ವಿನಾಯಕ್‌ 6ನೇ, 12 ವರ್ಷದ ಕೆಳಗಿನ ಬಾಲಕಿಯರ ವಿಭಾಗದಲ್ಲಿ ರಕ್ಷಿತಾ 2ನೇ ಸ್ಥಾನ , ಕಾವೇರಿ 5ನೇ ಸ್ಥಾನ, 14 ವರ್ಷದ ಕೆಳಗಿನ ಬಾಲಕಿಯರಲ್ಲಿ ಮಧು ಪ್ರಥಮ, ದೊಡ್ಡಮ್ಮ 3ನೇ ಸ್ಥಾನ ಗಳಿಸಿದದಾರೆ.

ಇದನ್ನೂ ಓದಿ :ಉಪಾಧ್ಯಾಯರು ಏಕಾತ್ಮ ಮಾನವತೆಯ ಹರಿಕಾರ: ಅಶ್ವತ್ಥನಾರಾಯಣ್

14 ವರ್ಷದ ಕೆಳಗಿನ ಬಾಲಕರ ವಿಭಾ ಗದಲ್ಲಿ ಸಂಗಮೇಶ್‌ ಪ್ರಥಮ, ದೀಪಕ್‌ ದ್ವಿತೀಯ, ಆದಿತ್ಯ 3ನೇ, ಸಂಗಪ್ಪ 4ನೇ, 16 ವರ್ಷದ ಕೆಳಗಿನ ಬಾಲಕಿಯರ ವಿಭಾಗದಲ್ಲಿ ಸುಪ್ರೀತಾ 4ನೇ ಸ್ಥಾನ, 18 ವರ್ಷದ ಕೆಳಗಿನ ಬಾಲಕರ ವಿಭಾಗದಲ್ಲಿ ಸಂಗಮೇಶ್‌ ಪ್ರಥಮ, ರಾಮನಗೌಡ 4ನೇ ಸ್ಥಾನ, 18 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ವೀರಭದ್ರ ಪ್ರಥಮ, ಶ್ರೀಧರ್‌ 2ನೇ ಸ್ಥಾನ, ಶಂಕರಪ್ಪ 3ನೇ ಸ್ಥಾನ, ಹನುಮಂತ 6ನೇ ಸ್ಥಾನ ಗಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next