Advertisement

ಕೋಲಿ ಎಸ್‌ಟಿ ಸೇರ್ಪಡೆ ಕಡತ ದೆಹಲಿಗೆ ರವಾನೆ

03:51 PM Mar 04, 2017 | Team Udayavani |

ಶಹಬಾದ: ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ಸತತ ಪ್ರಯತ್ನ ನಡೆಯುತ್ತಿದ್ದು, ಇತ್ತೀಚೆಗೆ ಕೆಲವು ಸ್ಪಷ್ಟೀಕರಣಕ್ಕಾಗಿ ದೆಹಲಿಯಿಂದ ಕಡತ ರಾಜ್ಯಕ್ಕೆ ಬಂದಿತ್ತು. ಅವಶ್ಯಕ ಸ್ಪಷ್ಟೀಕರಣ ನೀಡಿ, ಮತ್ತೆ ದೆಹಲಿಗೆ ಕಳುಹಿಸಲಾಗಿದೆ. ಈ ಬಗ್ಗೆ ಮಾಜಿ ಸಚಿವ, ಶಾಸಕ ಬಾಬುರಾವ್‌ ಚಿಂಚನಸೂರ ಸತತ ಪ್ರಯತ್ನದಲ್ಲಿದ್ದು, ಸಮಾಜ  ಎಸ್‌ಟಿಗೆ ಸೇರ್ಪಡೆಯಾಗುವ ಕಾಲ ಸನ್ನಿಹಿತವಾಗಿದೆ ಎಂದು ವಿಜಯಕುಮಾರ ಚಿಂಚನಸೂರ ಹೇಳಿದರು. 

Advertisement

ಸಮೀಪದ ಭಂಕೂರ ಗ್ರಾಮದಲ್ಲಿ ಕೋಲಿ ಸಮಾಜದ  ವತಿಯಿಂದ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ತೊನಸನಳ್ಳಿಯ ಕೊಟ್ಟೂರೇಶ್ವರ ಶರಣರು ಸಾನ್ನಿಧ್ಯ ವಹಿಸಿ ಮಾತನಾಡಿ, ಅಂಬಿಗರ ಚೌಡಯ್ಯ ಬಸವಾದಿ  ಶರಣರ ಕಾಲದ ಒಬ್ಬ ಕ್ರಾಂತಿಕಾರಿ ವಚನಕಾರರಾಗಿದ್ದು, ಸಮಾಜದ ಓರೆಕೋರೆಗಳನ್ನು ತಮ್ಮ ವಚನಗಳ ಮೂಲಕ ದಿಟ್ಟವಾಗಿ ತಿಳಿಸಿದ್ದಾರೆ ಎಂದರು.

ಮುಗುಳನಾಗಾವದ ಅಭಿವನ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ರಾಜ್ಯ ಕೋಲಿ ಸಮಾಜದ ಗೌರವ ಅಧ್ಯಕ್ಷ ತಿಪ್ಪಣ್ಣ ಕಮಕನೂರ, ಬಿಜೆಪಿ ಮುಖಂಡ ರಾಜಗೋಪಾಲರೆಡ್ಡಿ, ಚಿತ್ತಾಪುರ ಬಿಸಿಸಿ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಪ್ರತಿಪಕ್ಷದ ನಾಯಕ ಶಿವಾನಂದ ಪಾಟೀಲ, ಸಮಾಜದ ಯಾದಗಿರಿ ಜಿಲ್ಲಾ ಅಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿದರು. 

ಲಕ್ಷ್ಮೀಕಾಂತ ಕಂದಗೋಳ ಅಧ್ಯಕ್ಷತೆ ವಹಿಸಿದ್ದರು. ತಾಪಂ ಪ್ರತಿಪಕ್ಷದ ನಾಯಕ ಮಲ್ಲಣ್ಣ ಸಣಮೋ, ತಾಪಂ ಸದಸ್ಯೆ ವಿಜಯಲಕ್ಷ್ಮೀ ಚವ್ಹಾಣ, ಶಶಿಕಾಂತ ಪಾಟೀಲ, ಕಿರಣಕುಮಾರ ಜಡಗಿಕರ್‌, ರಾಮಲಿಂಗ ಸರಡಗಿ ಇದ್ದರು. ನಿಂಗಣ್ಣ ನಂದಿಹಳ್ಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಶಿರಗೂಂಡ ನಿರೂಪಿಸಿದರು. ಭೀಮರಾಯ ತಮರಾವತಿ ವಂದಿಸಿದರು. ಇದಕ್ಕೂ ಪೂರ್ವ ಚಂದ್ರಕಾಂತ ಪಾಟೀಲ ಮಹದ್ವಾರದಿಂದ ಅಂಬಿಗರ ಚೌಡಯ್ಯ ಮಂಟಪದವರೆಗೆ ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next