Advertisement

SSLC Revaluation ಲಿಟಲ್‌ಹಾರ್ಟ್ ಶಾಲೆಯ ವಿದ್ಯಾರ್ಥಿನಿಯರಿಗೆ 4 ಮತ್ತು 7ನೇ ರ‍್ಯಾಂಕ್

08:13 PM Jun 07, 2023 | Team Udayavani |

ಗಂಗಾವತಿ: ನಗರದ ಲಿಟಲ್‌ಹಾರ್ಟ್ ಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಎಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದ ಮರು ಮೌಲ್ಯಮಾಪನದಲ್ಲಿ 4 ಮತ್ತು 7ನೇ ರ‍್ಯಾಂಕ್ ಲಭಿಸಿದೆ.

Advertisement

2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ 625 ಕ್ಕೆ 617 ಅಂಕಗಳನ್ನು ಪಡೆದಿದ್ದ ಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ಸೃಜನ ಇಂದರಗಿ ಹಾಗೂ ವಂದನಾ ಭಂಡಾರ್ಕರ್ ಎನ್ನುವ ವಿದ್ಯಾರ್ಥಿಗಳು ಕ್ರಮವಾಗಿ ಇಂಗ್ಲೀಷ್ ಹಾಗೂ ಗಣಿತ ವಿಷಯಗಳನ್ನು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಸೃಜನ ಇಂದರಗಿ ಇಂಗ್ಲೀಷ್ ವಿಷಯದಲ್ಲಿ 5 ಅಂಕಗಳನ್ನು ಹಾಗೂ ವಂದನಾ ಭಂಡಾರಕರ್ ಗಣಿತ ವಿಷಯದಲ್ಲಿ 2 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಸೃಜನಾ 625 ಕ್ಕೆ 622 ಅಂಕಗಳನ್ನು ಹಾಗೂ ವಂದನಾ 625 ಕ್ಕೆ 619 ಅಂಕಗಳನ್ನು ಪಡೆದು ಕ್ರಮವಾಗಿ ರಾಜ್ಯಕ್ಕೆ 4ನೇ ಹಾಗೂ 7ನೇ ರ‍್ಯಾಂಕ್ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಹಾಗೂ ಮುಖ್ಯೋಪಾಧ್ಯಾಯಿನಿ ಪ್ರಿಯಾಕುಮಾರಿ. ಪಿ. ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next