Advertisement

ಅಗಸ್ಟ್‌  2ನೇ ವಾರ ಎಸೆಸೆಲ್ಸಿ ಫ‌ಲಿತಾಂಶ: ಸುರೇಶ್‌ ಕುಮಾರ್‌

11:10 PM Jul 22, 2021 | Team Udayavani |

ಬೆಂಗಳೂರು: ಕೊರೊನಾ ಸಂದಿ ಗ್ಧತೆಯ ನಡುವೆಯೂ ಎಸೆಸೆಲ್ಸಿ ಪರೀಕ್ಷೆ ಯಶಸ್ವಿ ಯಾಗಿದ್ದು, ಆ. 10ರ ಆಸುಪಾಸಿನಲ್ಲಿ ಫ‌ಲಿತಾಂಶ ಘೋಷಣೆ ಮಾಡಲಿದ್ದೇವೆ ಎಂದು  ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

Advertisement

ಗುರುವಾರ ವಿವಿಧ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸೆಸೆಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ.96.65 ಹಾಜರಾತಿ ದಾಖಲಾಗಿದೆ. ಕಳೆದ ವರ್ಷದ ವಾರ್ಷಿಕ ಪರೀಕ್ಷೆಗಿಂತ ಈ ಬಾರಿ  ಹೆಚ್ಚು ಮಕ್ಕಳು ಹಾಜರಾಗಿದ್ದಾರೆ.    ಭಾಷಾ-1 ವಿಷಯಕ್ಕೆ  ನೋಂದಾಯಿಸಿಕೊಂಡಿದ್ದ 8,19,694 ಅಭ್ಯರ್ಥಿಗಳಲ್ಲಿ  8,16,544 ಅಭ್ಯರ್ಥಿಗಳು ಹಾಜ ರಾಗಿದ್ದಾರೆ. ಶೇ. 99.62 ಹಾಜರಾತಿ ದಾಖಲಾಗಿದ್ದು, ಕಳೆದ ವರ್ಷ  ಶೇ. 98.41 ಹಾಜರಾತಿ ಇತ್ತು.

ಭಾಷಾ -2 ವಿಷಯಕ್ಕೆ 8,27,988 ಅಭ್ಯರ್ಥಿಗಳು ನೋಂದಾಯಿಸಿದ್ದರೆ, 8,24,686 ಅಭ್ಯರ್ಥಿಗಳು ಹಾಜರಾಗಿದ್ದಾರೆ. ಶೇ. 99.60 ಹಾಜರಾತಿ ಇದ್ದು, ಕಳೆದ ವರ್ಷ ಶೇ. 98.47 ಹಾಜರಾತಿಯಿತ್ತು. ಭಾಷಾ -3 ವಿಷಯಕ್ಕೆ  ನೋಂದಾಯಿಸಿದ್ದ 8,17,640 ಅಭ್ಯರ್ಥಿಗಳಲ್ಲಿ 8,14,538 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು ಶೇ.98.47ರಷ್ಟಿತ್ತು ಎಂದರು.

66 ಸೋಂಕಿತ ವಿದ್ಯಾರ್ಥಿಗಳು:

ರಾಜ್ಯದಲ್ಲಿ ಒಟ್ಟಾರಿ 67 ಕೊರೊನಾ ಸೋಂಕಿತರು ಪರೀಕ್ಷೆ ಬರೆದಿದ್ದಾರೆ. ಕೋಲಾರ, ಹಾಸನದಲ್ಲಿ ಇಬ್ಬರು ಸೋಂಕಿತರು ಗೈರು ಹಾಜರಾಗಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿದ್ದ ಐಸೊಲೇಷನ್‌ ರೂಂನಲ್ಲಿ 152 ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೇಂದ್ರ ಬದಲು ಮಾಡಿಕೊಂಡ 10,693 ವಿದ್ಯಾರ್ಥಿಗಳು, ಹಾಸ್ಟೆಲ್‌ನಲ್ಲಿ ವಾಸವಿದ್ದು 2,870 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ವಿವರಿಸಿದರು.

Advertisement

ಎಲ್ಲರಿಗೂ ಪಿಯು ಅವಕಾಶ :

ಈ ಬಾರಿ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುತ್ತಿ ರುವುದರಿಂದ  ಪಿಯುಸಿ ಸೇರ ಬಯಸುವ ಎಲ್ಲರಿಗೂ ಪ್ರವೇಶಾವಕಾಶ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಕೀ ಉತ್ತರ ಪ್ರಕಟ :

ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಕೀ ಉತ್ತರಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.     ಮಂಡಳಿಯ ವೆಬ್‌ಸೈಟ್‌  https://sslc.karnataka.gov.in/   ನಲ್ಲಿ  ಉತ್ತರ ಕೀ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next