ಕುಷ್ಟಗಿ: ಉದಯವಾಣಿ ಬೈಕ್ ರೂಟ್ ಪತ್ರಿಕೆ ವಿತರಕನ ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾಳೆ.
ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯ ನಿವಾಸಿ ಸಿದ್ದಪ್ಪ ಗುರಿಕಾರ ಇಲ್ಲಿನ ಎಪಿಎಂಸಿಯಲ್ಲಿ ಜೀವನೋಪಾಯಕ್ಕಾಗಿ ಹಮಾಲಿ ಕೆಲಸದಲ್ಲಿದ್ದಾರೆ. ಅಲ್ಲದೇ ಹೆಚ್ಚುವರಿಯಾಗಿ ಉದಯವಾಣಿ ದಿನಪತ್ರಿಕೆ ಕುಷ್ಟಗಿಯಿಂದ ಮುದೇನೂರು ಬೈಕ್ ರೂಟ್ ವಿತರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಇವರ ಇಬ್ಬರು ಮಕ್ಕಳಲ್ಲಿ ಶೋಭಾ ಹಿರಿಯ ಮಗಳು. ಇಲ್ಲಿನ ಕ್ರೈಸ್ತ್ ಕಿಂಗ್ ಶಾಲೆಯ ವಿದ್ಯಾರ್ಥಿನಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 543 ಅಂಕ ಪಡೆದಿದ್ದಾಳೆ.
ಮನೆತನದ ಕಷ್ಟಕರ ಪರಿಸ್ಥಿತಿಯಲ್ಲಿ ಸಿದ್ದಪ್ಪ ಗುರಿಕಾರ ತನ್ನ ಮಗಳು ಶೋಭಾಗೆ ಕೊರತೆಯಾಗದಂತೆ ವಿಧ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದರು. ಅಂತೆಯೇ ವಿಧ್ಯಾರ್ಥಿನಿ ಶೋಭಾ ತಂದೆಯ ಶ್ರಮಕ್ಕೆ ಕಷ್ಟಪಟ್ಟು ವಿಧ್ಯಾಭ್ಯಾಸ ಮಾಡಿದ್ದು ಪ್ರತಿ ದಿನ ಟ್ಯೂಷನ್ ಗೆ 2 ಕಿ.ಮೀ. ಹಾಗೂ ಕ್ರೈಸ್ತ್ ಕಿಂಗ್ ಶಾಲೆಗೆ 1.5 ಕೀ.ಮೀ. ನಡೆದು ವಿದ್ಯಾಭ್ಯಾಸ ಮಾಡಿದ್ದಾಳೆ.
ಶಾಲೆಯಲ್ಲಿ ಅಂದಿನ ಪಾಠಗಳನ್ನು ಆ ದಿನ ಓದುವ ರೂಢಿಯಿಂದ ಕಷ್ಟಕರ ಎನಿಸಲಿಲ್ಲ. ಶಾಲೆಯಲ್ಲಿ ಉತ್ತಮ ಭೋಧನೆಗೆ ಶೇ.90 ರಷ್ಟು ನಿರೀಕ್ಷೆ ಮಾಡಿದ್ದು ಆದರೆ ಫಲಿತಾಂಶ ಶೇ.87 ಬಂದರೂ ತೃಪ್ತಿಯಿದ್ದು, ಮುಂದೆ ಐಎಎಸ್ ಗುರಿ ಇದೆ ಎಂದರು.
ನನ್ನ ಈ ಸಾಧನೆಗೆ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ಅಂಕಗಳ ಹೆಚ್ಚಳಕ್ಕೆ ಸಾದ್ಯವಾಗಿದೆ. ಈ ನನ್ನ ಸಾಧನೆಗೆ ತಂದೆಯ ತ್ಯಾಗ ಮರೆಯುವಂತಿಲ್ಲ. ಮನೆಯ ಕಷ್ಟಕರ ಪರಿಸ್ಥಿತಿ ತೋರಿಸದೇ ನನ್ನ ವಿದ್ಯಾಭ್ಯಾಸಕ್ಕೆ ಬೆಂಗಾವಲಾಗಿ ನಿಂತಿದ್ದಾರೆ. ನನ್ನ ತಂದೆ-ತಾಯಿ ಅನಕ್ಷರಸ್ಥರಾಗಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕೆ ತಮ್ಮ ಜೀವ ಸವೆಸುತ್ತಿರುವುದು ಗಮನಾರ್ಹ ಎನಿಸಿದೆ ಎಂದರು.