ಎಕರೆ ಜಮೀನಿನಲ್ಲಿ ಅಂತರ್ಜಲ ಕೊರತೆ ಹಿನ್ನೆಲೆಯಲ್ಲಿ ಎರಡೇ ಎಕರೆ ನೀರಾವರಿ ಇನ್ನುಳಿದ ಜಮೀನಿನಲ್ಲಿ ಮಳೆಯಾಧಾರಿತ
ಕೃಷಿ ಮಾಡುವ ಯಂಕಪ್ಪ ಬಂಡ್ರಗಲ್ ಹಾಗೂ ಶರಣಮ್ಮ ದಂಪತಿ ಜಮೀನಿನಲ್ಲೇ ವಾಸವಾಗಿದ್ದಾರೆ. ಇವರಿಗೆ ಪುತ್ರಿ, ಇಬ್ಬರು
ಪುತ್ರರಿರುವ ಕುಟುಂಬದಲ್ಲಿ ರೈತ ಯಂಕಪ್ಪ ವಡ್ರಕಲ್ ಅವರು ಕಷ್ಟಕರ ಪರಿಸ್ಥಿತಿಯಲ್ಲೂ ತಮ್ಮ ಮೂವರು ಮಕ್ಕಳ ಶಿಕ್ಷಣಕ್ಕಾಗಿ
ಶ್ರಮಿಸುತ್ತಿದ್ದಾರೆ. ಈ ರೈತ ದಂಪತಿ ಅವಿರತ ಶ್ರಮಕ್ಕೆ ಅವರ ದ್ವಿತೀಯ ಪುತ್ರ ಬಾಳಪ್ಪ, ಪ್ರಸಕ್ತ ಎಸ್ಸೆಸ್ಸೆಲ್ಸಿಯಲ್ಲಿ ಶೇ.97.12 ಅಂಕಗಳ ಸಾಧನೆಯ ಸಾರ್ಥಕತೆ ತಂದಿದ್ದಾನೆ.
Advertisement
ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ತಮ್ಮ ಜಮೀನಿನಿಂದ ಎರಡೂವರೆ ಕಿ.ಮೀ. ದೂರ ಕಾಲ್ನಡಿಗೆ ಇಲ್ಲವೇ 8ನೇ ತರಗತಿಯಲ್ಲಿಸರ್ಕಾರ ನೀಡಿದ ಸೈಕಲ್‌ನಲ್ಲಿ ಹೋಗಿ ಬರುತ್ತಿದ್ದ ಬಾಳಪ್ಪನ ಆಸಕ್ತಿ ಗುರುತಿಸಿ, ಶಾಲೆಯ ಶಿಕ್ಷಕರು, ಪ್ರಾಥಮಿಕ ಶಿಕ್ಷಕರು
ಮಾರ್ಗದರ್ಶನ ನೀಡಿದ್ದಾರೆ. ಯಾವೂದೇ ಟ್ಯೂಷನ್‌ಗೆ ಹೋಗದೇ ವಿಶೇಷ ತರಗತಿಗಳನ್ನು ತಪ್ಪಿಸಿಕೊಳ್ಳದೇ ಅಭ್ಯಾಸದಲ್ಲಿ ನಿರತನಾಗಿದ್ದ. ನಿತ್ಯದ ಅಭ್ಯಾಸದ ಕ್ರಮದಲ್ಲಿ ಮನೆಯಲ್ಲಿ ಟಿವಿ ಇಲ್ಲ, ಆ್ಯಂಡ್ರೈಡ್ ಮೊಬೈಲ್ ಇಲ್ಲದ ಕೊರತೆಯಲ್ಲೂ ಬೇರೊಬ್ಬರ ಮನೆಯಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾಗಿವ ಟಿವಿ ಪಾಠ, ಶಿಕ್ಷಕರ ಮೊಬೈಲ್ ಪಡೆದುಕೊಂಡು ಕೊರತೆ ನೀಗಿಸಿಕೊಂಡಿದ್ದಾನೆ. ಶೇ. 98 ಅಂಕಗಳ ನಿರೀಕ್ಷೆಯೊಂದಿಗೆ ಓದಿದ್ದೇ ಆದರೆ ಶೇ. 97.12 ಅಂಕ ಬಂದಿರುವುದು ತೃಪ್ತಿ ಇದೆ. ಮುಂದೆ ಪಿಯು ಕಲಾ ಶಿಕ್ಷಣ ಆಯ್ಕೆ ಮಾಡಿಕೊಂಡು ಮುಂದೆ ಐಎಎಸ್ ಮಾಡುವ ಗುರಿ ಹೊಂದಿದ್ದೇನೆ. ಪಿಯು ಕಲಾ ಶಿಕ್ಷಣ
ಮುಂದುವರಿಸಬೇಕೆಂದು ಇನ್ನು ನಿರ್ಧರಿಸಿಲ್ಲ.