Advertisement
ನಗರದ ಡಿಡಿಪಿಐ ಕಚೇರಿ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಕಾಂಪೌಂಡ್‌ಗೇಟ್‌ಗೆ ಬೀಗ ಹಾಕಿ ಸಾರ್ವಜನಿಕರು ಒಳಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಲಾಗಿತ್ತು. ಡಿಡಿಪಿಐ ಕೆ.ರತ್ನಯ್ಯ ಹಾಗೂ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ಬೆಂಗಳೂರಿನಿಂದ ಬೀಗಮುದ್ರೆಯೊಂದಿಗೆ ಆಗಮಿಸಿದ್ದ ವಾಹನದಿಂದ ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಪಡೆದುಕೊಂಡು ಸ್ಥಳದಲ್ಲೇ ಪರಿಶೀಲನೆ ನಡೆಸುತ್ತಿದ್ದುದು ಕಂಡು ಬಂತು.
Related Articles
Advertisement
ತಾಲೂಕುವಾರು ಖಜಾನೆಯಲ್ಲಿ ಸಂರಕ್ಷಣೆ: ತಾಲೂಕು ಮಾರ್ಗಾ ಕಾರಿಗಳ ನೇತೃತ್ವದಲ್ಲಿ ಶಸ್ತ್ರಸಜ್ಜಿತ ಪೊಲೀಸರ ರಕ್ಷಣೆಯಲ್ಲಿ ಹೊರಟ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಆಯಾ ತಾಲೂಕು ಖಜಾನೆಗಳಲ್ಲಿ ಠೇವಣಿ ಮಾಡಿ ಸಂರಕ್ಷಿಸಿಡಲು ಡಿಡಿಪಿಐ ಕೆ.ರತ್ನಯ್ಯ ಸೂಚನೆ ನೀಡಿದರು.
ಕೋಲಾರ ತಾಲೂಕಾದ್ಯಂತ ಇರುವ ಒಟ್ಟು 17 ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿ ಸಿದ ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾ ಖಜಾನೆಯಲ್ಲಿ ಸಂರಕ್ಷಿಸಿಡಲಾಗಿದ್ದು, ಕ್ಷೇತ್ರ ಶಿಕ್ಷಣಾಧಿ ಕಾರಿ ಕೆ.ಎಸ್.ನಾಗರಾಜಗೌಡ, ತಾಲೂಕು ಪರೀಕ್ಷಾ ನೋಡೆಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡು ಖಜಾನೆಗೆ ರವಾನಿಸಿದರು.
ಉಳಿದಂತೆ ಬಂಗಾರಪೇಟೆಯ 11 ಕೇಂದ್ರಗಳ ಪ್ರಶ್ನೆಪತ್ರಿಕೆಗಳು, ಮಾಲೂರಿನ 11 ಕೇಂದ್ರಗಳು, ಮುಳಬಾಗಿಲಿನ 10, ಕೆಜಿಎಫ್‌ನ 10, ಶ್ರೀನಿವಾಸಪುರದ 12 ಕ್ಷೇತ್ರಗಳ ಪ್ರಶ್ನೆಪತ್ರಿಕೆಗಳನ್ನು ಆಯಾ ತಾಲೂಕು ಖಜಾನೆಗಳಿಗೆ ಸಂರಕ್ಷಿಸಿಡಲು ಪೊಲೀಸ್ ಬಂದೋಬಸ್ತ್ನಲ್ಲಿ ಸಾಗಿಸಲಾಯಿತು.
ಈ ಸಂದರ್ಭದಲ್ಲಿ ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾ ಧಿಕಾರಿ ಸಿ.ಆರ್.ಅಶೋಕ್, ಬಿಇಒಗಳಾದ ಕೆ.ಎಸ್.ನಾಗರಾಜಗೌಡ, ಮಾಧವರೆಡ್ಡಿ, ಕೆಂಪಯ್ಯ, ಷಂಷೂನ್ನೀಸಾ, ಕೆಂಪರಾಮು, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯತ್ರಿ, ಮುಖ್ಯ ಅಧೀಕ್ಷಕರಾದ ಪಟ್ನ ನಾಗರಾಜ್, ನಜೀರ್ ಮತ್ತಿತರರು ಹಾಜರಿದ್ದರು.