Advertisement
ಪ್ರತಿವರ್ಷ ಪ್ರಶ್ನೆಪತ್ರಿಕೆ ಸಿದ್ಧ ಪಡಿಸಿ, ಪರೀಕ್ಷೆ ನಡೆಸುವ ಮೇಲುಸ್ತುವಾರಿ ಯನ್ನು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ನೋಡಿಕೊಳ್ಳುತ್ತಿತ್ತು. ಈ ಬಾರಿ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಮೂಲಕ ನಡೆಸಲಾಗುತ್ತಿದ್ದು, ವೇಳಾಪಟ್ಟಿಯನ್ನು ಶಾಲೆಗೆ ಕಳುಹಿಸಲಾಗಿದೆ.
ಸಿದ್ಧತೆ ಪರೀಕ್ಷೆಗೆ ವಿದ್ಯಾರ್ಥಿಯಿಂದ 60 ರೂ. ಪಡೆಯಲಾಗಿದೆ. 50 ರೂ. ಮಾತ್ರ ಪಡೆಯುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇಲಾಖೆಯ ಉನ್ನತಾಧಿಕಾರಿಗಳಿಗೆ, ಡಿಡಿ ಪಿಐ, ಬಿಇಒಗಳಿಗೆ ಲಿಖೀತ ರೂಪದಲ್ಲಿ ಸೂಚಿಸಿದ್ದಾರೆ. ಆದರೆ ಅದಿನ್ನೂ ಶಾಲೆಗಳಿಗೆ ತಲುಪಿಲ್ಲ. ಈಗಾಗಲೇ ಬಹುತೇಕ ಶಾಲೆಗಳಲ್ಲಿ ಶುಲ್ಕ ಪಡೆದಿರು
ವುದರಿಂದ ಹೆಚ್ಚುವರಿ 10 ರೂ.ಯನ್ನು ವಾಪಸ್ ನೀಡುವ ಸಾಧ್ಯತೆ
ಕಡಿಮೆ. ಶುಲ್ಕಕ್ಕೆ ವಿರೋಧ
ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಪ್ರತ್ಯೇಕ ಶುಲ್ಕ ಪಡೆಯಲಾಗುತ್ತದೆ. ಅಷ್ಟಾಗಿಯೂ ಪೂರ್ವ ಸಿದ್ಧತೆ ಪರೀಕ್ಷೆಗೆ ಶುಲ್ಕ ಪಡೆಯುವ ಅಗತ್ಯ ಏನಿದೆ? ಈ ಹಿಂದೆ ಶುಲ್ಕ ರಹಿತವಾಗಿ ಪರೀಕ್ಷೆಗಳು ನಡೆಯುತ್ತಿದ್ದವು. ಈಗ ಶುಲ್ಕ ಪಡೆಯುವುದು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಹೀಗಾಗಿ ಸಂಗ್ರಹಿಸಿರುವ ಶುಲ್ಕವನ್ನು ಹಿಂದಿರುಗಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
Related Articles
ಪೂರ್ವಸಿದ್ಧತೆ ಪರೀಕ್ಷೆಗೆ ಬಿಇಒ ಹಂತದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪ್ರಶ್ನೆ ಪತ್ರಿಕೆಯನ್ನು ವಾರ್ಷಿಕ ಪರೀಕ್ಷೆಯ ಮಾದರಿಯಲ್ಲೇ ಸಿದ್ಧಪಡಿಸಿ ಬಿಇಒ ಗಳಿಗೆ ಕಳುಹಿಸಲಾಗಿದೆ. ಬಿಇಒಗಳು ಅದನ್ನು ತಮ್ಮ ಹಂತದಲ್ಲಿ ಮುದ್ರಿಸಿ ಶಾಲೆಗಳಿಗೆ ನೀಡಬೇಕು. ಕೆಲವು ಜಿಲ್ಲೆಗಳಲ್ಲಿ ಬಿಇಒ ಹಂತದಲ್ಲಿ ವಿಷಯ ತಜ್ಞರ ಮೂಲಕ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿತ್ತು. ಈಗ ಹೊಸ ಆದೇಶ ಬಂದಿರುವುದರಿಂದ ಅಧಿಕಾರಿ ಗಳಲ್ಲೂ ಗೊಂದಲ ಮೂಡಿದೆ.
Advertisement
5, 8ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆಮಾರ್ಚ್ ತಿಂಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂ ಕನ ಪರೀಕ್ಷೆ ನಡೆಯಲಿದ್ದು, ಇದರ ಮಾದರಿ ಪ್ರಶ್ನೆ ಪತ್ರಿಕೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಬಿಇಒ ಲಾಗಿನ್‌ಗೆ ಕಳುಹಿಸಲಾಗಿದೆ. ಬಿಇಒಗಳು ವಿಷಯ ತಜ್ಞರ ಮೂಲಕ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ಶಾಲೆಗಳಿಗೆ ಹಂಚಬೇಕು. ಯಾವುದೇ ಆದೇಶ ಬಾರದಿದ್ದರೂ ಕೆಲವು ಶಾಲೆಗಳಲ್ಲಿ ಶುಲ್ಕ ಪಡೆಯಲಾಗಿದೆ ಎಂಬ ದೂರುಗಳೂ ಇವೆ. ಎಸೆಸೆಲ್ಸಿ ಪೂರ್ವಸಿದ್ಧತೆ ಪರೀಕ್ಷೆಯ ಶುಲ್ಕ 60 ರೂ. ಇತ್ತು. ಅದನ್ನು 50 ರೂ.ಗಳಿಗೆ ಇಳಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಅಧಿಕೃತ ಆದೇಶ ಬಂದಿಲ್ಲ. ಮೌಲ್ಯಾಂಕನ ಪರೀಕ್ಷೆಗೆ ಯಾವುದೇ ಶುಲ್ಕ ಇಲ್ಲ. ಪರೀಕ್ಷಾ ಸಿದ್ಧತೆಗಳು ಬಿಇಒ ಹಂತದಲ್ಲಿ ನಡೆಯುತ್ತಿದೆ.
-ಗಣಪತಿ ಮತ್ತು ಸುಧಾಕರ್,
ಡಿಡಿಪಿಐ, ಉಡುಪಿ ಮತ್ತು ದ.ಕ.