Advertisement
ಜಿಲ್ಲೆಯಲ್ಲಿ 95 ಪರೀಕ್ಷೆ ಕೇಂದ್ರಗ ಳಿದ್ದು ಹೆಚ್ಚುವರಿಯಾಗಿ 19 ಕೇಂದ್ರಗಳನ್ನು ಗುರುತಿಸಲಾಗಿದೆ. 1,585 ಕೊಠಡಿಗಳಲ್ಲಿ 30,835 ವಿದ್ಯಾರ್ಥಿ ಗಳು ಪರೀಕ್ಷೆ ಬರೆಯಲು ಎಲ್ಲ ಸಿದ್ಧತೆ ಆಗಿದೆ. ಈ ಜಿಲ್ಲೆಯಲ್ಲಿ ನೋಂದಾಯಿಸಿ ಬೇರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ 1318 ವಿದ್ಯಾರ್ಥಿಗಳಿಗೆ ಆಯಾ ಜಿಲ್ಲೆ ಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದೆ ಎಂದರು. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಭಾರತ್ ಸ್ಕೌಟ್-ಗೈಡ್ ಸಂಸ್ಥೆಯಿಂದ 4 ಸದಸ್ಯರ ಜತೆ ಆರೋಗ್ಯ, ಪೊಲೀಸ್ ಇಲಾಖೆಯಿಂದ ತಲಾ ಇಬ್ಬರು ಸಿಬಂದಿಯನ್ನು ನೀಡಲಾಗುತ್ತದೆ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವ ಜವಾಬ್ದಾರಿಯನ್ನು ಆಯಾ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ., ಮನಪಾ, ನಗರಸಭೆ, ಪಟ್ಟಣ ಪಂಚಾಯತ್ ಮತ್ತು ಪುರಸಭೆಗಳು ವಹಿಸಿಕೊಳ್ಳ ಬೇಕು ಎಂದು ತಿಳಿಸಿದರು.
ಕಾಸರಗೋಡು: ಕರ್ನಾಟಕ ರಾಜ್ಯದಲ್ಲಿ ಜೂ. 25ರಿಂದ ಜು. 4ರ ವರೆಗೆ ನಡೆಯುವ ಎಸೆಸೆಲ್ಸಿ ಪರೀಕ್ಷೆಗೆ ಕಾಸರಗೋಡು ಜಿಲ್ಲೆಯಿಂದ 367 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಇ-ಪಾಸ್ ಅಗತ್ಯವಿಲ್ಲ. ಬೆಳಗ್ಗೆ 7.30ರ ಒಳಗೆ ನಿಗದಿತ ಸ್ಥಳಕ್ಕೆ ತಲುಪಬೇಕು. ಪರೀಕ್ಷೆಯ ಪ್ರವೇಶ ಪತ್ರ ಜತೆಗಿದ್ದರೆ ಸಾಕು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರು ತಿಳಿಸಿದ್ದಾರೆ. ಈ ವರೆಗೆ ಮಂಜೇಶ್ವರ ವರೆಗೆ ಮಾತ್ರ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು ಪರೀಕ್ಷೆಯ ದಿನಗಳಲ್ಲಿ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ತಲಪಾಡಿ ವರೆಗೆ ಸಂಚರಿಸಲಿವೆ. ಎಲ್ಲ ಗಡಿ ಪ್ರದೇಶಗಳಿಂದ ದ.ಕ. ಜಿಲ್ಲಾಡಳಿತ ಬಸ್ ಸೌಲಭ್ಯ ಒದಗಿಸಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.