ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತಂತೆ ಸೋಮವಾರ ಸಭೆ ಸೇರಿ ಚರ್ಚಿಸಲಾಗುವುದು. ಒಂದು ಡೆಸ್ಕ್ನಲ್ಲಿ, ಒಂದು ಕೊಠಡಿಯಲ್ಲಿ ಎಷ್ಟು ಮಕ್ಕಳನ್ನು ಕೂರಿಸಬೇಕು ಎಂಬ ಕುರಿತೂ ಚರ್ಚೆ ನಡೆಸಲಾಗುವುದು. ತಪಾಸಣೆ, ಮಾಸ್ಕ್ ಧರಿಸುವುದು ಸೇರಿ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವು ದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಗೃಹ ಕಚೇರಿ “ಕೃಷ್ಣಾ’ದಲ್ಲಿ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನ್ನು ಭೇಟಿಯಾಗಿದ್ದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಖಾಸಗಿ ಶಾಲೆಗಳು ಸರ್ಕಾರ ಸುತ್ತೋಲೆ ಹೊರಡಿಸುವವರೆಗೂ ಶಾಲಾ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ಆದೇಶ ಹೊರ ಡಿಸಲಾಗಿತ್ತು. ನಂತರ ಖಾಸಗಿ ಶಿಕ್ಷಣ ಸಂಸ್ಥೆ ಯವರು ಸಂಬಳ ಪಾವತಿಸಲು ತೊಂದರೆ ಯಾಗುತ್ತಿದೆ ಎಂದು ಮನವಿ ಮಾಡಿದ್ದರು.
ಹೀಗಾಗಿ ಪೋಷಕರಿಗೆ ಒತ್ತಾಯ ಮಾಡಿ ಶುಲ್ಕ ಸಂಗ್ರಹಿಸುವಂತಿಲ್ಲ. ಪೋಷಕರೇ ಪಾವತಿಸಲು ಒಪ್ಪಿದರೆ ಶುಲ್ಕ ಸಂಗ್ರಹಿಸಬೇಕು ಎಂದು ಸೂಚಿಸಲಾಗಿತ್ತು. ನಂತರ ಮೂರನೇ ಸುತ್ತೋಲೆಯಲ್ಲಿ ಈ ವರ್ಷ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಹಾಗೆಯೇ ಮಕ್ಕಳು, ಪೋಷಕರಿಗೆ ಬೇರೆ ಬೇರೆ ರೀತಿಯಲ್ಲಿ ಹಿಂಸೆ ನೀಡದಂತೆ ನಿಗಾ ವಹಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಶಾಲೆ ಆರಂಭ ಗೊಂದಲ ಬೇಡ: ರಾಜ್ಯದಲ್ಲಿ ಶಾಲೆಗಳನ್ನು ತರಾತುರಿಯಲ್ಲಿ ಪುನರ್ ಆರಂಭ ಮಾಡುವುದಿಲ್ಲ. ಈ ಬಗ್ಗೆ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೊರೊನಾ ಲಾಕ್ ಡೌನ್ ಅವಧಿ ಚಾಲನೆಯಲ್ಲಿರುವುದರಿಂ ದ ಶಾಲೆಗಳ ಪುನರ್ ಆರಂಭಿಸುವ ಸಂಬಂಧ ಇನ್ನು ಯಾವುದೇ ನಿರ್ಧಾರ ತೆಗೆದು ಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಳಿ ಪದ್ಧತಿ ಆದೇಶ ಹೊರಡಿಸಿಲ್ಲ: ಪಾಳಿ ಪದ್ಧತಿಯಲ್ಲಿ ಶಾಲಾ ಆರಂಭಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ, ಈ ವಿಚಾರ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಇತರೆಡೆ ದಿನಾಂಕ ಪ್ರಕಟ: ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಕೇರಳ ರಾಜ್ಯಗಳು ಈಗಾಗಲೇ ರಾಜ್ಯಪಠ್ಯಕ್ರಮದ 10ನೇ ತರಗತಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿವೆ. ಆಂಧ್ರಪ್ರದೇಶದಲ್ಲಿ ಜುಲೈ 10ರಿಂದ 17ರ ವರೆಗೆ, ಕೇರಳದಲ್ಲಿ ಉಳಿದ ವಿಷಯದ ಪರೀಕ್ಷೆ ಮೇ 26ರಿಂದ 28ರವರೆಗೆ ನಡೆಯಲಿದೆ. ತಮಿಳುನಾಡಿನಲ್ಲಿ ಜೂ.1ರಿಂದ ಜೂ. 10ರವರೆಗೆ ನಡೆಯಲಿದೆ. ತೆಲಂಗಾಣದಲ್ಲಿ ಉಳಿದ ಪರೀಕ್ಷೆ ಮೇ ಕೊನೆಯ ವಾರ ಅಥವಾ ಜೂನ್ ಮೊದಲ
ವಾರದಲ್ಲಿ ನಡೆಯಲಿದೆ.