ಈ ಹಿಂದೆ ಬಿಡುಗಡೆ ಮಾಡಿದ್ದ ತಾತ್ಕಾಲಿಕ ಪಟ್ಟಿಗೆ ಬಂದಿರುವ ಆಕ್ಷೇಪಣೆಗಳ ಆಧಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ಗುರುವಾರ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ.
Advertisement
ಬುಧವಾರ ಪಿಯು ಇಲಾಖೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಅಂತಿಮಗೊಳಿಸಿದ್ದ ಬೆನ್ನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ಅಧಿಕಾರಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. 2018ರ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಮಾರ್ಚ್ ತಿಂಗಳಲ್ಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ಣಗೊಳ್ಳಲಿದೆ. 2018ರ ಮಾರ್ಚ್ 1 ರಿಂದ 17ರ ತನಕ ಪಿಯುಸಿ ಪರೀಕ್ಷೆ ಹಾಗೂ ಮಾರ್ಚ್ 23 ರಿಂದ ಏ.6ರ ತನಕ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ.
ಈ ಮಧ್ಯೆ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಗೆ ಬಂದಿರುವುದು ಕೇವಲ ಎರಡು ಆಕ್ಷೇಪಣೆ! ಹೌದು, ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ.
Related Articles
Advertisement
ಎಸ್ಸೆಸ್ಸೆಲ್ಸಿ ವೇಳಾಪಟ್ಟಿ ಮಾ.23 ಪ್ರಥಮ ಭಾಷೆ(ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಮತ್ತು ಸಂಸ್ಕೃತ)
ಮಾ.24 (ಕೋರ್ ಸಬೆjಕ್ಟ್), ಅರ್ಥಶಾಸ್ತ್ರ
ಮಾ.26 ಗಣಿತ(ಮಧ್ಯಾಹ್ನ-ಸಮಾಜ ಶಾಸ್ತ್ರ)
ಮಾ.28 ದ್ವಿತೀಯ ಭಾಷೆ(ಕನ್ನಡ, ಇಂಗ್ಲಿಷ್)
ಏ.2 ವಿಜ್ಞಾನ, ರಾಜ್ಯಶಾಸ್ತ್ರ (ಮಧ್ಯಾಹ್ನ- ಕರ್ನಾಟಕ ಸಂಗೀತ, ಹಿಂದುಸ್ಥಾನಿ ಸಂಗೀತ)
ಏ.4 ತೃತೀಯ ಭಾಷೆ(ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು,ಸಂಸ್ಕೃತ, ಕೊಂಕಣಿ, ತುಳು)(ಎನ್‌ಎಸ್‌ಕ್ಯೂಎಫ್ ಪರೀಕ್ಷೆ)
ಏ.6 ಸಮಾಜ ವಿಜ್ಞಾನ ವಿಜ್ಞಾನ ಪರೀಕ್ಷೆಗೆ ನಾಲ್ಕು ದಿನ ರಜೆ :
ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಮಾ.31ರಂದು ವಿಜ್ಞಾನ ಪರೀಕ್ಷೆ ನಡೆಸುವುದಾಗಿ ತಿಳಿಸಲಾಗಿತ್ತು. ಅಂತಿಮ ವೇಳಾಪಟ್ಟಿಯಲ್ಲಿ ಅದನ್ನು ಬದಲಿಸಲಾಗಿದೆ. ಏ.2ರಂದು ವಿಜ್ಞಾನ ಪರೀಕ್ಷೆ ನಡೆಯಲಿದ್ದು, ಮಾ.28ಕ್ಕೆ ದ್ವಿತೀಯ ಭಾಷೆ ಪರೀಕ್ಷೆ ಮುಗಿದ ನಂತರ ಮಾ.29ರಂದು ಮಹಾವೀರಜಯಂತಿ, ಮಾ.30 ಗುಡ್‌ಫ್ರೈಡ್ ಜತೆ ಶನಿವಾರ, ಭಾನುವಾರ ಸೇರಿಕೊಂಡಿರುವುದರಿಂದ ವಿಜ್ಞಾನ ಪರೀಕ್ಷೆಗೆ ಓದಲು ನಾಲ್ಕು ದಿನ ರಜೆ ಇದೆ.