Advertisement
ಹಿಂದುಳಿದ ಜಿಲ್ಲೆಯಾದ ಯಾದಗಿರಿ ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದು, ಇದಕ್ಕೆ ಶಿಕ್ಷಕರ ನೇಮಕ ಕೊರೆತಯೂ ಒಂದಾಗಿದೆ.
Related Articles
Advertisement
ಪ್ರೌಢ ಶಾಲೆಗಳ 1435 ಮಂಜೂರಾತಿ ಶಿಕ್ಷಕರ ಹುದ್ದೆಯಲ್ಲಿ, 760 ಶಿಕ್ಷಕರ ಹುದ್ದೆಗಳು ಭರ್ತಿ ಮಾಡಲಾಗಿದೆ. ಸುಮಾರು 675 ಖಾಯಂ ಶಿಕ್ಷಕರ ಖಾಲಿ ಇದ್ದು, ಅದರಲ್ಲಿ, 650 ಅತಿಥಿ ಶಿಕ್ಷಕರ ನಿಯೋಜಿಸಿ ಮಕ್ಕಳಿಗೆ ಪಾಠ ಮಾಡಲಾಗಿದೆ. ಕಲಿಕಾ ಮಟ್ಟ ಸುಧಾರಣೆ ವಿಶೇಷ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಆದರೂ ಫಲಿತಾಂಶ ಸುಧಾರಣೆ ಕಂಡಿಲ್ಲ. ಮಕ್ಕಳನ್ನು ಕರೆದುಕೊಂಡು ಪೋಷಕರು ವಲಸೆ ಹೋಗಿದ್ದು ಕೂಡ, ಫಲಿತಾಂಶ ಹಿನ್ನಡೆಗೆ ಕಾರಣವಾಗಿದೆ ಎಂದು ಯಾದಗಿರಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.