Advertisement

SSLC EXAM: ನಾಗರಬೆಟ್ಟದ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ

01:24 PM May 08, 2023 | Shreeram Nayak |

ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನಾಗರಬೆಟ್ಟದ ಆಕ್ಸ್‌ಫರ್ಡ್‌ ಪಾಟೀಲ್ಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ ಭೀಮನಗೌಡ ಹಣಮಂತಗೌಡ ಪಾಟೀಲ 625ಕ್ಕೆ 625 ಅಂಕ ಪಡೆದು ರಾಜ್ಯದ ಟಾಪರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿದ್ದಾನೆ.

Advertisement

ಮೂಲತಃ ಬಾಗಲಕೋಟ ಜಿಲ್ಲೆಯ ಬುದ್ನಿ ಗ್ರಾಮದ ರೈತ ಕುಟುಂಬದವನಾದ ಈತ 9 ಮತ್ತು 10 ನೇ ತರಗತಿಯನ್ನು ಆಕ್ಸಫರ್ಡ್ ಶಾಲೆಯಲ್ಲಿ ಕಲಿತಿದ್ದಾನೆ. 6-8 ತರಗತಿಯನ್ನು ಮುದ್ದೇನಹಳ್ಳಿಯ ಸಾಯಿ ಶಾಲೆಯಲ್ಲಿ, 1-5 ತರಗತಿಯನ್ನು ಬಾಗಲಕೋಟ ಜಿಲ್ಲೆ ಬಂಟನೂರಿನಲ್ಲಿ ಕಲಿತಿದ್ದಾನೆ. ಪಿಯುಸಿ ವಿಜ್ಞಾನ ಕಲಿತು ಜೆಇಇ ಪಾಸಾಗಿ ಐಐಟಿಗೆ ಸೇರುವುದು ಅವನ ಜೀವನದ ಗುರಿಯಾಗಿದೆ. ಈತನಿಗೆ ಒಬ್ಬ ಸಹೋದರ ಇದ್ದು 9 ತರಗತಿಯಲ್ಲಿದ್ದಾನೆ. ಈ ಶಾಲೆ ಸತತ ಮೂರು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next