Advertisement
ಮಹಾಮಾರಿ ಕೊರೊನಾ ಹಾವಳಿ, ಲಾಕ್‌ಡೌನ್ ಜಾರಿಯ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಳಂಬವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾದ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದಾಗಬಹುದು ಎಂಬ ಲೆಕ್ಕಾಚಾರವೂ ಇತ್ತು. ಆದರೆ, ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗಿರುವ ವಿದ್ಯಾರ್ಥಿಗಳು 9ನೇ ತರಗತಿ ಪರೀಕ್ಷೆಬರೆದಿಲ್ಲ. ಆಂತರಿಕ, ಪೂರ್ವ ಸಿದ್ಧತಾ ಪರೀಕ್ಷೆ ನಡೆಯದೇ ಇರುವುದು ಇನ್ನಿತರ ಕಾರಣದಿಂದ ಕೊನೆಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆದಿದೆ.
Related Articles
Advertisement
ಪ್ರಾರಂಭಿಕ ಹಂತದಲ್ಲಿ ಜಿಲ್ಲೆಯ 80 ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಬೇಕಿತ್ತು. ಕೊರೊನಾಕಾರಣಕ್ಕೆ 40 ಹೆಚ್ಚುವರಿ ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ. ಚನ್ನಗಿರಿ ತಾಲೂಕಿನಲ್ಲಿ 16 ಕೇಂದ್ರಗಳಿಗೆಹೆಚ್ಚುವರಿಯಾಗಿ 7, ದಾವಣಗೆರೆ ಉತ್ತರದಲ್ಲಿ 14 ಕೇಂದ್ರಗಳ ಜತೆಗೆ 4,ದಾವಣಗೆರೆ ದಕ್ಷಿಣದಲ್ಲಿ 21 ಕೇಂದ್ರಗಳಜತೆಗೆ ಹೆಚ್ಚುವರಿಯಾಗಿ 21,ಹರಿಹರದಲ್ಲಿ 10 ಕೇಂದ್ರಗಳ ಜತೆಗೆ 7, ಹೊನ್ನಾಳಿಯಲ್ಲಿ 10 ಕೇಂದ್ರಗಳ ಜತೆಗೆ 6 ಮತ್ತು ಜಗಳೂರಿನಲ್ಲಿ 9 ಕೇಂದ್ರಗಳ ಜತೆಗೆ ಹೆಚ್ಚುವರಿಯಾಗಿ 5 ಕೇಂದ್ರಗಳನ್ನು ಗುರುತಿಸಲಾಗಿದೆ.
ಕೊರೊನಾ, ಲಾಕ್‌ಡೌನ್ ನಿಂದ ಸರಿಯಾಗಿ ಶಾಲೆಗಳು ನಡೆದಿಲ್ಲ. ಪಾಠ-ಪ್ರವಚನ ಸಹಪೂರ್ಣವಾಗಿಯೇ ಇಲ್ಲ. ಈ ಎಲ್ಲ ಕಾರಣದಿಂದ ಕಳೆದ ಸಾಲುಗಳಂತೆ ವಿವರಣಾತ್ಮಕ ಪ್ರಶ್ನೆ ಪತ್ರಿಕೆಗಳ ಬದಲಿಗೆಸರಳೀಕೃತ, ಬಹು ಆಯ್ಕೆ ಮಾದರಿ ಪರೀಕ್ಷೆಗೆ ಇಲಾಖೆ ಸಜ್ಜಾಗಿದೆ. ವಿದ್ಯಾರ್ಥಿ ಸಮುದಾಯಕ್ಕೆ ಹೊಸ ಪದ್ಧತಿಯಲ್ಲಿ ನಡೆಯುವ ಪರೀಕ್ಷೆ ಸಮಸ್ಯೆ ತಂದೊಡ್ಡುವಂತಿದ್ದರೂ ಪರೀಕ್ಷೆ ಎದುರಿಸಬೇಕಾಗಿದೆ.
-ರಾ. ರವಿಬಾಬು