ಚಿಕ್ಕೋಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದಿರುವ ಕುಮಾರಿ ಸಹನಾ ಶಂಕರ ಕಾಮಗೌಡರ ಅವರ ಮುಂದಿನ ಶಿಕ್ಷಣ ಖರ್ಚು ವೆಚ್ಚವನ್ನು ಸಿಎಲ್ಇ ಸಂಸ್ಥೆ ಭರಿಸಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಜಗದೀಶ ಕವಟಗಿಮಠ ಹೇಳಿದರು.
ಮಂಗಳವಾರ ನಗರದ ಸಿಎಲ್ಇ ಶಿಕ್ಷಣ ಸಂಸ್ಥೆಯಲ್ಲಿ ಹತ್ತನೆ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ ರಾಂಕ್ ಪಡೆದಿರುವ ಸಹನಾ ಅವಳನ್ನು ಸತ್ಕರಿಸಿದ ಬಳಿಕ ಅವರು ಈ ಘೋಷಣೆ ಮಾಡಿದರು.
ಕು.ಸಹನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಸಿಎಲ್ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಪ್ರೌಢ ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು. ಕು.ಸಹನಾ ಅವಳ ಮುಂದಿನ ಶಿಕ್ಷಣದ ಎಷ್ಟೇ ಖರ್ಚು ವೆಚ್ಚವಾದರೂ ಅದನ್ನು ಸಂಸ್ಥೆ ಭರಿಸುವ ತೀರ್ಮಾನವನ್ನು ಆಡಳಿತ ಮಂಡಳಿ ತೆಗೆದುಕೊಂಡಿದೆ ಎಂದರು.
ಕನ್ನಡ ಮಾಧ್ಯಮದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಸಹನಾ ಪಾಲಕರಿಗೆ ದೊಡ್ಡ ಸಂದೇಶ ಕೊಟ್ಟಿದ್ದಾರೆ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಇಂಜಿನೀಯರಿಂಗ್ ಹಾಗೂ ಮೆಡಿಕಲ್ ವಿಭಾಗಕ್ಕೆ ಹೆಚ್ಚಿನ ಒತ್ತು ಕೊಡದೇ ಐಎಎಸ್.ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಒತ್ತು ಕೊಟ್ಟು ಸರಕಾರಿ ಸೇವೆ ಮಾಡಲು ಮುಂದಾಗಬೇಕು. ಇತ್ತಿಚ್ಚೆಗೆ ಯುಪಿಎಸ್ ಸಿ ಫಲಿತಾಂಶದಲ್ಲಿ ಹೆಚ್ಚಿನವರು ಕನ್ನಡ ಮಾಧ್ಯಮದವರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀಕಾಂತ್ ಚನ್ನವರ. ನಿರ್ದೇಶಕರಾದ ಮಹಾಂತೇಶ ಭಾತೆ. ಮುಖ್ಯಾಧ್ಯಾಪಕ ಲೋಕಡೆ. ಆಡಳಿತಾಧಿಕಾರಿ ಸಾಗರ ಬೀಸ್ಕೋಪ.ಪ್ರಾಚಾರ್ಯರಾದ ಸುರೇಶ ಉಕ್ಕಲಿ. ದೀಪಕ ಪಾಟೀಲ.ಎಸದ.ಬಿ.ಮುಲ್ಲಾ ಮುಂತಾದವರು ಇದ್ದರು.