ಗುರುಮಠಕಲ್ : ಸರಕಾರಿ ಪ.ಪೂ ಕಾಲೇಜುನಲ್ಲಿ ಹತ್ತನೇ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಅವೈಜ್ಞಾನಿಕ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಸೋಮವಾರ ನಡೆದ ಪ್ರಥಮ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 166 ವಿದ್ಯಾರ್ಥಿಗಳು ನೋಂದಣಿ ಆಗಿದ್ದಾರೆ. ಇದರಲ್ಲಿ 5 ವಿದ್ಯಾರ್ಥಿಗಳನ್ನು ಮಾತ್ರ ಬೇರೆ ಕೋಣೆಯಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಯುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಪಾಲಕರು ದೂರಿದ್ದಾರೆ.
ಹತ್ತನೇ ಪರಿಕ್ಷೆಗಾಗಿ 9 ಕೋಣೆಗಳನ್ನು ಮೀಸಲು ಇಡಲಾಗಿತ್ತು. ಪರೀಕ್ಷಾ ಮುಖ್ಯಸ್ಥರು ಒಂದು ಹೆಚ್ಚುವರಿ ಕೋಣೆಯನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಪರಿಕ್ಷೆಯನ್ನು ಬರೆಯಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗ ಸಂಭಂಧಿಸಿದಂತೆ ಮೇಲಾಧಿಕಾರಿಗಳು ಇದರಕಡೆ ಗಮನ ನೀಡಿ ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕಸಾಪ ಬೈಲಾದಲ್ಲಿ ಮೂಲ ನಿಬಂಧನೆಗಳನ್ನು ವಿಸ್ತರಿಸಿದೆ ಹೊರತು ತೆಗೆದು ಹಾಕಿಲ್ಲ : ಅರಳಿ ನಾಗರಾಜ