Advertisement

SSLC  ಪರೀಕ್ಷೆ-2:  ನೋಂದಣಿ ದಿನಾಂಕ ವಿಸ್ತರಣೆ

11:18 PM May 16, 2024 | Team Udayavani |

ಬೆಂಗಳೂರು: ಎಸೆಸೆಲ್ಸಿ  ಪರೀಕ್ಷೆ-2ನ್ನು ನಡೆಸುವ ಸಂಬಂಧ ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಗೆ ನೋಂದಣಿ ದಿನಾಂಕವನ್ನು ಮೇ 16ರಿಂದ ಮೇ 19(ಮಧ್ಯರಾತ್ರಿ 12ಗಂಟೆ)ರ ವರೆಗೆ ವಿಸ್ತರಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶಿಸಿದೆ.

Advertisement

2024ರ ಎಸೆಸೆಲ್ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆಗೆ ಗೈರು ಹಾಜರಾದ / ಪೂರ್ಣಗೊಳಿಸಲಾಗಿಲ್ಲದ /ಹಿಂದಿನ ಸಾಲಿನಲ್ಲಿ ಅನುತ್ತೀರ್ಣರಾದ ಹಾಗೂ ಫ‌ಲಿತಾಂಶ ಉತ್ತಮ ಪಡಿಸಿಕೊಳ್ಳುವ ಅಭ್ಯರ್ಥಿಗಳಿಗೆ 2024ರ ಜೂನ್‌ನಲ್ಲಿ ಎಸೆಸೆಲ್ಸಿ  ಪರೀಕ್ಷೆ-2ನ್ನು ನಡೆಸುವ ಸಂಬಂಧ ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಗೆ ನೋಂದಣಿ ದಿನಾಂಕವನ್ನು ಮೇ 16ರಿಂದ ಮೇ 19(ಮಧ್ಯರಾತ್ರಿ 12 ಗಂಟೆಯ ವರೆಗೆ)ರ ವರೆಗೆ ವಿಸ್ತರಿಸಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ. ಸುಮಾರು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಶೇಷ ತರಗತಿ ಆದೇಶ ಹಿಂಪಡೆಯಿರಿ: ಸಿಎಂಗೆ ಶಹಾಪೂರ ನಿಯೋಗ ಮನವಿ

2023-24ನೇ ಶೈಕ್ಷಣಿಕ ವರ್ಷದ ಎಸೆಸೆಲ್ಸಿ   ಪರೀಕ್ಷೆ-1 ರಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ “ವಿಶೇಷ ತರಗತಿ’   ನಡೆಸುವ ಆದೇಶವನ್ನು ಹಿಂಪಡೆಯುವಂತೆ ರಾಜ್ಯ ಸರಕಾರವನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಆಗ್ರಹಿಸಿದೆ.

ಗುರುವಾರ ವಿಧಾನಸೌಧ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂಘದ ಕಾರ್ಯಾಧ್ಯಕ್ಷ ಅರುಣ ಶಹಾಪೂರ ನೇತೃತ್ವದ ನಿಯೋಗವು ಮನವಿ  ಸಲ್ಲಿಸಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು.

Advertisement

ಪರೀಕ್ಷೆ-1ರಲ್ಲಿ ಅನುತ್ತೀರ್ಣಗೊಂಡವರಿಗೆ ವಿಶೇಷ ತರಗತಿ ನಡೆಸುವಂತೆ ಆದೇಶಿಸಿದ್ದ ಇಲಾಖೆ, ಈಗ ಪ್ರಧಾನ ಕಾರ್ಯದರ್ಶಿ, ಆಯುಕ್ತರು ಹಾಗೂ ಹೆಚ್ಚುವರಿ ಆಯುಕ್ತರ ಮೂಲಕ ಪದೇಪದೆ ಜ್ಞಾಪನ ಆದೇಶಗಳನ್ನೂ ನೀಡುತ್ತಿದು, ಇದು ಶಿಕ್ಷಕ ಸಮೂಹಕ್ಕೆ ತೀವ್ರ ಆಘಾತ ಉಂಟುಮಾಡಿದೆ.

ಪರೀಕ್ಷೆ, ಮೌಲ್ಯಮಾಪನ ಕಾರ್ಯ ಮತ್ತು ಚುನಾವಣ ಕರ್ತವ್ಯ ನಿರ್ವಹಿಸಿ ಈಗಷ್ಟೇ ಬೇಸಗೆ ರಜೆ ಮೇಲೆ ತೆರಳಿರುವ ಶಿಕ್ಷಕರು ಈ ರೀತಿಯ ಸುತ್ತೋಲೆಗಳ  ಖನ್ನತೆಗೆ ಒಳಗಾಗಿ¨ªಾರೆ. ಶಿಕ್ಷಕರು ರಜೆ ಸಹಿತ ನೌಕರರ ವರ್ಗಕ್ಕೆ ಸೇರಿದ್ದು, ರಜೆ ಅವಧಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳು, ಕುಟುಂಬ ಪ್ರವಾಸ ಮತ್ತು ಕೌಟುಂಬಿಕ ಪೂರ್ವನಿಯೋಜಿತ ಕಾರ್ಯಗಳಿಗೆ ಬೇರೆ ಬೇರೆ ಸ್ಥಳಗಳಿಗೆ ತೆರಳಿರುವುದರಿಂದ ಈ ಸಮಯದಲ್ಲಿ ಶಾಲಾ ಕರ್ತವ್ಯಕ್ಕೆ ಹಾಜರಾಗಿ ವಿಶೇಷ ತರಗತಿ ನಡೆಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next