Advertisement
ನೂರುದ್ದೀನ್ ಅವರಿಗೆ ಸಂಕಷ್ಟ ತಂದ ಇಂಗ್ಲಿಷ್ ಹೈದರಾಬಾದ್‌ನ ಮುಷೀರಾಬಾದ್ ಪ್ರದೇಶದ ಅಂಜುಮಾನ್ ಬಾಯ್ಸ ಪ್ರೌಢಶಾಲೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ 51 ವರ್ಷದ ಮೊಹಮ್ಮದ್ ನೂರುದ್ದೀನ್ 1987ರಿಂದ 10ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರೂ 2019ರ ವರೆಗೂ ಪಾಸಾಗುವುದು ಸಾಧ್ಯವಾಗಿರಲಿಲ್ಲ. ಪ್ರತಿಬಾರಿಯೂ ಇಂಗ್ಲಿಷ್‌ನಲ್ಲಿ ಅನುತ್ತೀರ್ಣನಾಗುತ್ತಿದ್ದರು. ಆದರೆ ಪ್ರಯತ್ನವನ್ನು ಬಿಟ್ಟಿರಲಿಲ್ಲ.
ಕೋವಿಡ್ 19 ವೈರಸ್ ಪರಿಸ್ಥಿತಿಯಲ್ಲಿ ತೆಲಂಗಾಣ ಸರಕಾರವು ಲಾಕ್ ಡೌನ್ ಹೇರಿ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಗಿತಗೊಳಿಸಿತು. ಇದರ ಅನಂತರ ಪರೀಕ್ಷೆಗಳನ್ನು ರದ್ದುಪಡಿಸಿ ಎಲ್ಲ ಅಭ್ಯರ್ಥಿಗಳನ್ನು ಉತ್ತೀರ್ಣ ಎಂದು ಘೋಷಿಸಿತು. ಇದರ ಪ್ರಯೋಜನ ನೂರುದ್ದೀನ್ ಅವರಿಗೂ ಸಿಕ್ಕಿ 10ನೇ ತರಗತಿ ಪಾಸಾಗುವಂತಾಗಿದೆ.