Advertisement
2ನೇ ಇನಿಂಗ್ಸ್‌ನಲ್ಲಿ ಫಾಲೋಆನ್ ಪಡೆದಿದ್ದ ಒಡಿಶಾ, ವಿಕೆಟ್ ನಷ್ಟವಿಲ್ಲದೆ 33 ರನ್ ಬಾರಿಸಿದ್ದಲ್ಲಿಂದ ದಿನದಾಟ ಆರಂಭಿಸಿತು. ಆದರೆ ದ್ವಿತೀಯ ಇನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಒಡಿಶಾ, 107 ರನ್‌ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಆರಂಭಿಕ ಇನಿಂಗ್ಸ್‌ನಲ್ಲಿ 308 ರನ್ ಬಾರಿಸಿದ್ದರೆ, 147 ರನ್ ಬಾರಿಸಿ ಹಿನ್ನಡೆ ಅನುಭವಿಸಿತ್ತು.
Related Articles
Advertisement
ಗ್ರೂಪ್ “ಎ’ಯಲ್ಲಿರುವ ಕರ್ನಾಟಕ ತಂಡ ಡಿ.6ರಿಂದ ಬೆಂಗಳೂರಿನ ಆಲೂರಿನಲ್ಲಿ ಆರಂಭವಾಗಲಿರುವ ಕೊನೇ ಪಂದ್ಯದಲ್ಲಿ ಮೇಘಾಲಯ ವಿರುದ್ಧ ಗೆಲ್ಲಲೇಬೇಕು. ಆಗ ಮಾತ್ರ ಅದು ಕ್ವಾರ್ಟರ್‌ಗೆàರುವ ಸಣ್ಣ ಅವಕಾಶವಿದೆ. ಏಕೆಂದರೆ ಈ ಗುಂಪಿನಲ್ಲಿ ಕರ್ನಾಟ 4ಲ್ಲಿ 2 ಪಂದ್ಯ ಗೆದ್ದು 3ನೇ ಸ್ಥಾನದಲ್ಲಿದ್ದರೆ, ಅಗ್ರ 2 ಸ್ಥಾನಗಳಲ್ಲಿ ಬರೋಡಾ ಮತ್ತು ಡೆಲ್ಲಿ ತಂಡಗಳಿವೆ.