Advertisement

ಎಸ್ಸೆಸ್ಸೆಲ್ಸಿ; ಶೇ.84.95 ಫಲಿತಾಂಶ ದಾಖಲು- ಎ ಗ್ರೇಡ್ ಪಟ್ಟಿಯಲ್ಲಿ ಸ್ಥಾನ ಪಡೆದ ಧಾರವಾಡ

10:29 AM May 20, 2022 | Team Udayavani |

ಧಾರವಾಡ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಶೇ.84.95 ಫಲಿತಾಂಶ ದಾಖಲಿಸುವ ಮೂಲಕ “ಎ’ ಗ್ರೇಡ್‌ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. 2019 ಮತ್ತು 2020 ನೇ ಸಾಲಿನಲ್ಲಿ ಶೇ.74 ಫಲಿತಾಂಶ ದಾಖಲಿಸಿ ಹಿನ್ನಡೆ ಅನುಭವಿಸಿದ್ದ ಜಿಲ್ಲೆಯ ಫಲಿತಾಂಶ ಈ ವರ್ಷ ಪ್ರಗತಿ ಕಂಡಿದೆ.

Advertisement

ಪರೀಕ್ಷೆಗೆ ಹಾಜರಾಗಿದ್ದ 29,569 ವಿದ್ಯಾರ್ಥಿಗಳ ಪೈಕಿ 25,120 ವಿದ್ಯಾರ್ಥಿಗಳು ಪಾಸಾಗಿದ್ದರೆ, 4449 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. “ಎ’ ಪ್ಲಸ್‌ ಶ್ರೇಣಿಯಲ್ಲಿ 3151, “ಎ’ ಶ್ರೇಣಿಯಲ್ಲಿ 5877, “ಬಿ’ ಶ್ರೇಣಿಯಲ್ಲಿ 5585, “ಬಿ’ ಪ್ಲಸ್‌ ಶ್ರೇಣಿಯಲ್ಲಿ 6169, “ಸಿ’ ಶ್ರೇಣಿಯಲ್ಲಿ 817, “ಸಿ’ ಪ್ಲಸ್‌ ಶ್ರೇಣಿಯಲ್ಲಿ 3521 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳು ಶೇ.85.62, ಅನುದಾನಿತ ಪ್ರೌಢಶಾಲೆಗಳು ಶೇ.88.61 ಹಾಗೂ ಅನುದಾನ ರಹಿತ ಪ್ರೌಢ ಶಾಲೆಗಳದ್ದು ಶೇ.90.13 ಫಲಿತಾಂಶ ದಾಖಲಾಗಿದೆ.

ಇನ್ನುಳಿದಂತೆ ಜಿಲ್ಲೆಯ 45 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದ್ದು, 5 ಶಾಲೆಗಳು ಶೇ.5 ಹಾಗೂ ನಾಲ್ಕು ಶಾಲೆಗಳು ಶೇ.4 ಫಲಿತಾಂಶ ದಾಖಲಿಸಿವೆ. ಇನ್ನುಳಿದಂತೆ ಅಣ್ಣಿಗೇರಿಯ ನಿಂಗಮ್ಮ ಅಂಗಡಿ ಪ್ರೌಢಶಾಲೆ ಹಾಗೂ ಅದರಗುಂಚಿಯ ಎಸ್‌. ಕೆ. ಪಾಟೀಲ್‌ ಪ್ರೌಢಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ.

ತಾಲೂಕು ವಾರು ಫಲಿತಾಂಶ: ಜಿಲ್ಲೆಯ 7 ತಾಲೂಕುಗಳ ಪೈಕಿ ಹುಬ್ಬಳ್ಳಿ ಶಹರ ಶೇ.91.89, ಕಲಘಟಗಿ ಶೇ.88.13, ಹುಬ್ಬಳ್ಳಿ ಗ್ರಾಮೀಣ ಶೇ.86.92, ಧಾರವಾಡ ಶಹರ ಶೇ.86.90, ಧಾರವಾಡ ಗ್ರಾಮೀಣ ಶೇ.86.84, ನವಲಗುಂದ ಶೇ.85, ಕುಂದಗೋಳ ಶೇ.84.82 ಫಲಿತಾಂಶ ದಾಖಲಿಸಿವೆ. ಹುಬ್ಬಳ್ಳಿ ಶಹರ ವ್ಯಾಪ್ತಿಯ ಚೇತನ ಪಬ್ಲಿಕ್‌ ಶಾಲೆಯ ಶಿವಾನಂದ ಬಸನಗೌಡ ಪಾಟೀಲ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾನೆ.

Advertisement

ಉಳಿದಂತೆ ಎಸ್‌ಜೆಎಸ್‌ ಸಮಿತ್ಸ ಬಾಲಕಿಯರ ಪ್ರೌಢಶಾಲೆಯ ದಿವ್ಯಾ ಪರಶುರಾಮ ಸಿ, ಧಾರವಾಡ ಶಹರ ವ್ಯಾಪ್ತಿಯ ಪವನ ಆಂಗ್ಲ ಮಾಧ್ಯಮ ಶಾಲೆಯ ಅಭಿಷೇಕ ಆರ್‌.ಎ., ಕೆ.ಇ. ಬೋರ್ಡ್‌ ಆಂಗ್ಲ ಮಾಧ್ಯಮ ಶಾಲೆಯ ರಘೋತ್ತಮ ಗಿರೀಶ ನಾಡಗೌಡ್ರ, ಸಿಂಚನಾ ದಯಾನಂದ ದಾನಗೇರಿ, ಹುಬ್ಬಳ್ಳಿ ಗ್ರಾಮೀಣದ ಡಾ|ಬಿ.ಆರ್‌. ಅಂಬೇಡ್ಕರ್‌ ಬಾಲಕಿಯರ ರೆಸಿಡೆನ್ಸಿಯಲ್‌ ಶಾಲೆಯ ಚೇತನಾ ಯಲ್ಲಪ್ಪ ಮಣಕವಾಡ 625ಕ್ಕೆ 624 ಅಂಕ ಪಡೆದಿದ್ದಾರೆ.

ಹುಬ್ಬಳ್ಳಿ ಶಹರ ವ್ಯಾಪ್ತಿಯ ಕಾನ್ವೆಂಟ್‌ ಪ್ರೌಢ ಶಾಲೆಯ ಭವನ ಕಠಾರೆ, ಡಾ| ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮಧುಶ್ರೀ ಎಸ್‌. ಶಿವಳ್ಳಿ, ಬೆನಕ ವಿದ್ಯಾ ಮಂದಿರ ಆಂಗ್ಲಮಾಧ್ಯಮ ಶಾಲೆಯ ಸುಚಿತ್ರಾ ಕೆ., ಧಾರವಾಡ ಶಹರ ವ್ಯಾಪ್ತಿಯ ಪ್ರಜೆಟೇಶನ್‌ ಗರ್ಲ್ಸ್‌ ಸ್ಕೂಲ್‌ನ ಸಯೀದಾ ಫರೀಫಾ ಸಿಮ್ರಾನ್‌ ಮದನಿ, ಜೆಎಸ್‌ಎಸ್‌ ಆಂಗ್ಲ ಮಾಧ್ಯಮ ಶಾಲೆಯ ನಿಖೀತಾ ಉಪ್ಪಾರ, ಕೆ.ಇ.ಬೋರ್ಡ್‌ ಆಂಗ್ಲ ಮಾಧ್ಯಮ ಶಾಲೆಯ ಭಾಗ್ಯಶ್ರೀ ಬಿರಾದಾರ, ಹುಬ್ಬಳ್ಳಿ ಗ್ರಾಮೀಣದ ನವನಗರ ರೋಟರಿ ಆಂಗ್ಲಮಾಧ್ಯಮ ಶಾಲೆಯ ಸಂಕಲ್ಪ ಎಸ್‌.ಕೆ. 625ಕ್ಕೆ 623 ಅಂಕ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next