Advertisement

9 ದಿನಗಳ ಚಿತ್ರೋತ್ಸವಕ್ಕೆ ಸಾಂಸ್ಕೃತಿಕ ಮುನ್ನುಡಿ

10:24 AM Nov 21, 2017 | Sharanya Alva |

ಪಣಜಿ: ಇಲ್ಲಿನ ವರ್ಣರಂಜಿತ ಪರಿಸರದಲ್ಲಿ ಸೋಮವಾರ 48ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ)ಕ್ಕೆ ಭವ್ಯವಾದ ಚಾಲನೆ ನೀಡಲಾಯಿತು. ಕರ್ನಾಟಕದ ಡೊಳ್ಳು ಕುಣಿತದ ಕಲರವ ವೇದಿಕೆಯನ್ನು ಆವರಿಸಿತು. ಈ ಮೂಲಕ 9 ದಿನಗಳ (ನ.20-28) ಉತ್ಸವಕ್ಕೆ ಸಾಂಸ್ಕೃತಿಕ ಮುನ್ನುಡಿ ಬರೆಯಿತು.

Advertisement

ಡಾ. ಶ್ಯಾಮ್‌ ಪ್ರಸಾದ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಾಲಿವುಡ್‌ ನಟ ಶಾರುಖ್‌ ಖಾನ್‌, ಸಿನಿಮಾವೆಂದರೆ ಪರಸ್ಪರ ಪ್ರೀತಿಸುವುದು. ಒಂದು ಕನಸು ನೂರಾರು ಜನರ ಪರಿಶ್ರಮದಿಂದ ನನಸಾಗುವ ಪ್ರಕ್ರಿ ಯೆ 
ಯೇ ಚೆಂದ. ಕಥೆ ಹೇಳುವವರು ಮತ್ತು ಕಥೆ ಕೇಳುವವರು ಒಂದು ಕುಟುಂಬವಿದ್ದಂತೆ ಎಂದರು.

ಸಮಾರಂಭದಲ್ಲಿ ಹಾಜರಿದ್ದ ಕೇಂದ್ರ ಜವಳಿ, ವಾರ್ತಾ ಮತ್ತು ಪ್ರಚಾರ ಸಚಿವೆ ಸ್ಮತಿ ಇರಾನಿ, ಹಲವು ಸಂಸ್ಕೃತಿಗಳು ಒಗ್ಗೂಡುವ ತಾಣವಿದು ಎಂದರು. ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌, 2019ರಲ್ಲಿ 50ನೇ ಚಿತ್ರೋತ್ಸವವನ್ನು ಆಚರಿಸಲು ಗೋವಾ ವಿಶೇಷವಾಗಿ
ಸಿದ್ಧಗೊಳ್ಳುತ್ತಿದೆ ಎಂದು ಪ್ರಕಟಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌, ನಟಿ ಶ್ರೀದೇವಿ, ನಟರಾದ ನಾನಾ ಪಾಟೇಕರ್‌, ಶಾಹಿದ್‌ ಕಪೂರ್‌ ಮತ್ತಿತರರು ಭಾಗವಹಿಸಿದ್ದರು. ಚಿತ್ರೋತ್ಸವ ಉದ್ಘಾಟನೆಗೆ ಡೊಳ್ಳು ಕುಣಿತ ವಿಶೇಷವಾಗಿ ಸಂಭ್ರಮವನ್ನು ತುಂಬಿತು. ಡೊಳ್ಳು ಕುಣಿತ, ಕಥಕ್ಕಳಿ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಒಳಗೊಂಡ ನೃತ್ಯವು ಭಾರತೀಯ ಸಾಂಸ್ಕೃತಿಕ ವೈವಿಧ್ಯವನ್ನು ಅನಾವರಣಗೊಳಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next