ಬೊರಿವಲಿ: ತುಳು-ಕನ್ನಡಿಗರ ಹಿರಿಯ ಧಾರ್ಮಿಕ ಸಂಸ್ಥೆಗಳಲ್ಲೊಂದಾದ ಬೊರಿವಲಿ ಪೂರ್ವದ ಸಾವರ್ಪಾಡಾದ ಶ್ರೀ ಶನಿಮಹಾತ್ಮ ಪೂಜಾ ಮಿತ್ರ ಮಂಡಳಿಯ ಸಂಚಾಲಕತ್ವದ ಶ್ರೀ ಶನಿ ಮಂದಿರದಲ್ಲಿ ವೈಶಾಖ ಅಮಾವಾಸ್ಯೆ ದಿನವಾದ ಮೇ 30ರಂದು ಶ್ರೀ ಶನಿ ಜಯಂತಿ ಆಚರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ನಡೆಯಿತು.
ಬೆಳಗ್ಗೆ ಶನಿದೇವರ ಸನ್ನಿಧಾನದಲ್ಲಿ ಆರಾಧ್ಯ ದೇವರಾದ ಶನಿದೇವರಿಗೆ ಪಂಚಾಮೃತ ಅಭಿಷೇಕ ಸೇವೆಗಳು ನೆರವೇರಿದವು. ಅಪರಾಹ್ನ 3ರಿಂದ ಮಂಡಳಿಯ ಸದಸ್ಯರಿಂದ ಸಂಪೂರ್ಣ ಶ್ರೀ ಶನಿಗ್ರಂಥ ಪಾರಾಯಣವನ್ನು ಆಯೋಜಿಸಲಾಗಿತ್ತು. ವಾಚಕರಾಗಿ ಸುಧಾಕರ್ ಸನಿಲ್, ರಾಮ ಕರ್ಕೇರ, ದಾಮೋದರ ತಿಂಗಳಾಯ, ಮಾಧವ ಮೊಗವೀರ ಹಾಗೂ ಅರ್ಥಧಾರಿಗಳಾಗಿ ಗಿರಿಧರ ಸುವರ್ಣ, ಕೃಷ್ಣ ಅಮೀನ್ ಸಹಕರಿಸಿದರು.
ಬಳಿಕ ರಾಯರ ಬಳಗದ ಕಿಶೋರ್ ಕರ್ಕೇರ, ದಶ್ ಕರ್ಕೇರ, ಮಾಧವ ಮೊಗವೀರ, ಪುರುಷೋತ್ತಮ ಮಂಚಿ, ಗಗನ್ ಮೆಂಡನ್, ಸುರೇಶ್ ಸಾಲ್ಯಾನ್, ಬಾಲರಾಜ್ ಕೋಟ್ಯಾನ್, ಗಿರೀಶ್ ಕರ್ಕೇರ ಅವರಿಂದ ಭಜನ ಕಾರ್ಯಕ್ರಮ ನಡೆಯಿತು. ಬಳಿಕ ಸರ್ವ ಸೇವೆ, ರಂಗಪೂಜೆ, ಪ್ರಸಾದ ವಿತರಣೆ ನಡೆಯಿತು.
ಪೂಜಾ ಕಾರ್ಯಗಳಲ್ಲಿ ವ್ಯಾಸ ಭಟ್, ಸ್ವಸ್ತಿಕ್ ಭಟ್ ಸಹಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಶನಿ ಮಹಾತ್ಮ ಪೂಜಾ ಮಿತ್ರ ಮಂಡಳಿಯ ಉಪಾಧ್ಯಕ್ಷ ಗಿರೀಶ್ ಕರ್ಕೇರ, ಜತೆ ಕಾರ್ಯದರ್ಶಿ ಗಿರಿಧರ ಸುವರ್ಣ, ಜತೆ ಕೋಶಾಧಿಕಾರಿ ಸುಧಾಕರ ಸನಿಲ್, ಗೋಪಾಲ್ ಪುತ್ರನ್, ದೇವೇಂದ್ರ ಸುರತ್ಕಲ್, ದಾಮೋದರ ತಿಂಗಳಾಯ, ಕೃಷ್ಣ ಅಮೀನ್, ವಾಸು ಕರ್ಕೇರ, ರಾಮ ಕರ್ಕೇರ, ಪ್ರಕಾಶ್ ಅಮೀನ್, ದಿವಾಕರ ಗೌಡ, ಕೋಶಾಧಿಕಾರಿ ಕೇಶವ ಕಾಂಚನ್, ರಘುನಾಥ್ ಸಾಲ್ಯಾನ್, ಯಶ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಸದಸ್ಯೆಯರು ಸರ್ವ ರೀತಿಯಲ್ಲಿ ಸಹಕರಿಸಿದರು.
ಸ್ಥಳೀಯ ಭಕ್ತರು, ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು, ತುಳು-ಕನ್ನಡಿಗರು ಸಹಿತ ಸುಮಾರು 3 ಸಾವಿರಕ್ಕಿಂತಲೂ ಹೆಚ್ಚು ಭಕ್ತರು ಶನಿದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಶ್ರೀ ಶನೀದೇವರ ಕೃಪೆಗೆ ಪಾತ್ರರಾದರು.