Advertisement
ಲಕ್ಷಾಂತರ ಭಕ್ತರ ಜಯಘೋಷ ದೊಂದಿಗೆ ತಿರುಮಲ ತಿರುಪತಿ ದೇವಸ್ಥಾನ ಇದರ ಪೌರೋಹಿತ್ಯದಲ್ಲಿ ಸಮಾಜ ಸೇವಕ ವಿರಾರ್ ಶಂಕರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ದಿನಪೂರ್ತಿ ಜರಗಿದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಅದ್ದೂರಿಯಿಂದ ಜರಗಿದವು. ಶ್ರೀನಿವಾಸ ಮಂಗಳ್ಳೋತ್ಸವ ಕಾರ್ಯಕ್ರಮಕ್ಕೆ ಮೊದಲು ತಿರುಪತಿ ಯಿಂದ ತಂದ ಶ್ರೀನಿವಾಸ ಮತ್ತು ಶ್ರೀ ದೇವಿ-ಭೂದೇವಿಯ ಮೂರ್ತಿ ಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ನೆರವೇರಿಸಿದರು. ತಿರುಪತಿ ದೇವಸ್ಥಾನದ ವಿಶ್ವಸ್ತರಾದ ಐಎಎಸ್ ಅಧಿಕಾರಿ ಶ್ರೀನಿವಾಸ ರಾಜ್ ಹಾಗೂ ತಿರುಪತಿಯ ಪುರೋಹಿತ ವೃಂದದವರು ವೇದ ಘೋಷ ಮೆರವಣಿಗೆಯೊಂದಿಗೆ ಮಂಗಳ್ಳೋತ್ಸವ ನೆರವೇರಿಸಿದರು.
ಮಂಗಳ್ಳೋತ್ಸವ ನೇತೃತ್ವದ ವಹಿಸಿದ ಭಾಯಿ ಠಾಕೂರ್ ಅವರು ಆಗಮಿಸಿ ಶ್ರೀದೇವರ ದರ್ಶದ ಪಡೆದರು. ಅಲ್ಲದೆ ರಾಜಕೀಯ ನೇತಾರರಾದ ಸಂಜಯ್ ರಾವುತ್, ಸಂಸದ ಗೋಪಾಲ್ ಶೆಟ್ಟಿ, ರಾಜನ್ ವಿಚಾರೆ, ಮನೀಷಾ ತಾಯಿ, ನರೇಂದ್ರ ಮೆಹ್ತಾ, ಪ್ರಕಾಶ್ ಸುರ್ವೇ, ಅರವಿಂದ ಎ. ಶೆಟ್ಟಿ, ಉಮೇಶ್ ನಾೖಕ್, ಬಿಎಸ್‌ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಶ್ರೀ ಸಾಯಿಧಾಮ ಟ್ರಸ್ಟ್ ವತಿಯಿಂದ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು. ಮಂಗಳ್ಳೋತ್ಸವದ ಪ್ರಾರಂಭದಲ್ಲಿ ಶ್ರೀ ದೇವರ ಮೂರ್ತಿಯನ್ನು ಶೋಭಾಯಾತ್ರೆಯ ಮೂಲಕ ಶ್ರೀಪ್ರಸ್ಥ ಮೈದಾನದ ಭವ್ಯ ವೇದಿಕೆಗೆ ತರಲಾಯಿತು. ಮಹಿಳೆಯರು ಕಲಶ ದೊಂದಿಗೆ, ಮಹಾರಾಷ್ಟ್ರ ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿ ಸುವ ಅನೇಕ ಸ್ತಬ§ಚಿತ್ರಗಳು ಹಾಗೂ ಮಹಾರಾಷ್ಟ್ರದ ಡೋಲು, ಕೇರಳದ ಚೆಂಡೆ, ತುಳುನಾಡಿನ ಹುಲಿವೇಷ, ಭಜನೆ ಹಾಗೂ ಸಾಂಸ್ಕೃತಿಕ ಉಡುಗೆ ತೊಡುಗೆಯ ಮೂಲಕ ವಿವಿಧ ಪ್ರದೇಶಗಳ ಭಕ್ತಾದಿಗಳು ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಿದರು.
ಮೀರಾರೋಡ್‌ನಿಂದ ಡಹಾಣೂ ವಿನವರೆಗಿನ ವಿವಿಧ ಸಂಘ-ಸಂಸ್ಥೆಗಳು, ಪದಾಧಿಕಾರಿಗಳು, ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬೇತಾಳ ನೃತ್ಯ, ನಾದಸ್ವರ ವಾದನ, ಜಂಬೋ ಸವಾರಿ, ಡೋಲು ಕುಣಿತ, ಯಕ್ಷಗಾನ ಪ್ರಾತ್ಯಕ್ಷಿಕೆ ವಿವಿಧ ಜಾನಪದ ನೃತ್ಯಗಳು ಶೋಭಾಯಾತ್ರೆಯಲ್ಲಿ ಭಕ್ತಾದಿಗಳನ್ನು ರಂಜಿಸಿತು. ರಸ್ತೆಯ ಎರಡೂ ಬದಿಯಲ್ಲೂ ಭಕ್ತಾದಿಗಳು ಹಾಗೂ ಮಹಿಳೆಯರು ನಿಂತು ಪುಷ್ಪವೃಷ್ಟಿಗೈದು ಶೋಭಾಯಾತ್ರೆಯನ್ನು ಸ್ವಾಗತಿಸಿದರು. ಶೋಭಾಯಾತ್ರೆಯಲ್ಲಿ ತಂದ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಬಳಿಕ ಮಂಗಳ್ಳೋತ್ಸವ ಕಾರ್ಯಗಳು ಆರಂಭಗೊಂಡಿತು. ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡು ಶ್ರೀನಿವಾಸ ಮಂಗಲೋತ್ಸವವನ್ನು ಕಣ್ತುಂಬಿಕೊಂಡರು. ಕೊನೆಯಲ್ಲಿ ಲಡ್ಡು ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
Related Articles
Advertisement