Advertisement

ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್‌ ಗೂ ಕೋವಿಡ್ ಪಾಸಿಟಿವ್

04:21 PM Aug 18, 2020 | sudhir |

ಮೈಸೂರು : ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ, ಜ್ವರ ಹಾಗೂ ಮೈಕೈ ನೋವಿನಿಂದ ಬಳಲುತ್ತಿದ್ದ ಅವರು ಮೈಸೂರಿನ ಜಯಲಕ್ಷ್ಮಿಪುರಂ ತನ್ನ ನಿವಾಸದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು, ಈ ಸಂದರ್ಭ ಅವರ ಪರೀಕ್ಷಾ ವರದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

Advertisement

ಸಂಸದರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮನೆಯ 17ಕ್ಕೂ ಹೆಚ್ಚು ಸದಸ್ಯರ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದೆ, ಶಾಸಕ ಹರ್ಷವರ್ಧನ್ ಸೇರಿ ಇತರರ ಪರೀಕ್ಷಾ ವರದಿ ನೆಗಟಿವ್ ಬಂದಿದೆ.

ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ.

ಸೋಮವಾರವಷ್ಟೇ ವಿಜಯೇಂದ್ರ, ಹಾಸನ ಶಾಸಕ ಪ್ರೀತಂಗೌಡ, ಎಂಎಲ್ ಸಿ ವಿಶ್ವನಾಥ್, ಮಾಜಿ ಸಚಿವ ವಿಜಯಶಂಕರ್ ಸೇರಿದಂತೆ ಹಲವರು ಸಂಸದರನ್ನು ಭೇಟಿಯಾಗಿದ್ದರು. ಈಗ ಅವರೆಲ್ಲರಿಗೂ ಕೋವಿಡ್ ಭೀತಿ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next