ಶೃಂಗೇರಿ: ಹೆತ್ತ ತಾಯಿಯೇ ತನ್ನ ಅಪ್ರಾಪ್ತ ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತೆಯ ತಾಯಿ ಸೇರಿದಂತೆ ನಾಲ್ವರು ಆರೋಪಿಗಳಿಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿದೆ.
ಏನಿದು ಪ್ರಕರಣ:
ಹೆತ್ತ ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ದೂಡಿ 2020ರ ಸೆಪ್ಟೆಂಬರ್ ನಿಂದ 2021ರ ಜನವರಿವರೆಗೆ ಬ್ಲಾಕ್ ಮೇಲೆ ಮಾಡಿ ಅತ್ಯಾಚಾರ ಎಸಗಲಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿ 2021ರ ಜನವರಿ 27ರಂದು ಪ್ರಕರಣ ದಾಖಲಾಗಿತ್ತು, ಅದರಂತೆ ಒಂದೇ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 39 ಎಫ್.ಐ.ಆರ್ ದಾಖಲಿಸಿ 53 ಜನರ ವಿರುದ್ದ ಪ್ರಕರಣ ದಾಖಲಿಸಿದ್ದರು.
ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ 53 ಮಂದಿಯಲ್ಲಿ ನಾಲ್ಕು ಜನರ ಮೇಲಿನ ಅಪರಾಧವನ್ನ ಸಾಬೀತು ಮಾಡಿದ್ದ ಕೋರ್ಟ್ ಉಳಿದ 49 ಮಂದಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
ನ್ಯಾಯಮೂರ್ತಿ ಶಾಂತಣ್ಣ ಆಳ್ವ ಅವರು ತೀರ್ಪು ನೀಡಿದ್ದು ಅದರಂತೆ ಬಾಲಕಿ ತಾಯಿ ಗೀತಾ, ಗಿರೀಶ್ , ದೇವಿಶರಣ್ ಗೆ ತಲಾ 25 ಸಾವಿರ ದಂಡ ಮತ್ತು 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು ಇನ್ನೋರ್ವ ಆರೋಪಿ ಅಭಿನಂದನ್ ಅಲಿಯಾಸ್ ಸ್ಮಾಲ್ ಅಭಿಗೆ 25 ಸಾವಿರ ದಂಡ ಮತ್ತು 22 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ: ಬ್ಯಾಂಕ್ ದರೋಡೆ ಪ್ರಕರಣ: ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆತಂದ ವಿಟ್ಲ ಪೊಲೀಸರು