Advertisement

ಮಂತ್ರಾಲಯದಲ್ಲಿ ಶ್ರೀಮನ್ಯಾಯಸುಧಾ ಮಂಗಳೋತ್ಸವ

10:32 PM Aug 25, 2022 | Team Udayavani |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಶ್ರೀಮನ್ಯಾಯಸುಧಾ ಅಧ್ಯಯನ ಮುಗಿಸಿದ ಐದನೇ ತಂಡದ ಮಂಗಳೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

Advertisement

ಮಠದ ಪ್ರಾಂಗಣದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಮತ್ತು ಮಹೋಪಾಧ್ಯಾಯ ಡಾ| ಗಿರಿಯಾಚಾರ್‌ ಸಮ್ಮುಖದಲ್ಲಿ ಸುಧಾ ಮಂಗಳ ಗ್ರಂಥದ ಕುರಿತು ಚರ್ಚೆ, ವ್ಯಾಖ್ಯಾನ ಮತ್ತು ಸಂವಾದಗಳು ನಡೆದವು. ದೇಶದ ವಿವಿಧೆಡೆಯಿಂದ 500ಕ್ಕೂ ಹೆಚ್ಚು ವಿದ್ವಾಂಸರು ಮಂಗಳೋತ್ಸವದಲ್ಲಿ ಭಾಗವಹಿಸಿದ್ದು, ಅಧ್ಯಯನ ಪೂರ್ಣಗೊಳಿಸಿದ ನಾಲ್ಕು ವಿದ್ಯಾರ್ಥಿಗಳನ್ನು ಪರೀಕ್ಷಿಸಿದರು.

ಸುಧಾ ಅಧ್ಯಯನ ಪೂರ್ಣಗೊಳಿಸಿದ ಶಶಿಧರಾಚಾರ್ಯ, ಸಂಪತ್‌ ಕುಮಾರಾಚಾರ್ಯ, ಸುಮುಖಾಚಾರ್ಯ ಹಾಗೂ ರಾಮಕೃಷ್ಣಾಚಾರ್ಯರಿಗೆ ಶ್ರೀ ಸುಬುಧೇಂದ್ರ ತೀರ್ಥರು ಪ್ರಮಾಣಪತ್ರ, 1 ಲಕ್ಷ ರೂ., ವಸ್ತ್ರ ಹಾಗೂ ಐದು ಬಗೆಯ ರಜತ ಪೂಜಾಪತ್ರೆಗಳನ್ನು ನೀಡಿ ಆಶೀರ್ವದಿಸಿದರು. ವಿದ್ಯಾರ್ಥಿಗಳು ಗುರುಗಳಿಗೆ ಫಲಪುಷ್ಪಗಳನ್ನು ಸಮರ್ಪಿಸಿದರು.

ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಮಂತ್ರಾಲಯ ಶ್ರೀಮಠವು ವಿದ್ಯಾಮಠವೆಂದು ಪ್ರಸಿದ್ಧಿ ಪಡೆದಿದೆ. ವಿದ್ಯಾರ್ಥಿಗಳಿಗೆ ಹಾಗೂ ಗುರುಗಳಿವೆ ಆಶ್ರಯ ನೀಡಿದೆ. ಈ ಪರಂಪರೆಯು ಎಂದಿನಂತೆ ಮುಂದುವರಿಸಲಾಗಿದೆ. ಸಂಸ್ಕೃತ ವಿದ್ಯಾಪೀಠದಿಂದ ಐದನೇ ತಂಡವು ಶ್ರೀಮನ್ಯಾಯಸುಧಾ ಅಧ್ಯಯನ ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ಮಂಗಳೋತ್ಸವ ಆಯೋಜಿಸ ಲಾಗಿದೆ. 6ನೇ ತಂಡದ ಅಧ್ಯಯನವೂ ಅರ್ಧದಷ್ಟು ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಮಂಗಳ್ಳೋತ್ಸವ ಏರ್ಪಡಿಸಿ ಮಠಾಧೀಶರನ್ನು ಆಹ್ವಾನಿಸಲಾಗುವುದು. ಏಳು ತಂಡದಲ್ಲಿ 9 ವಿದ್ಯಾರ್ಥಿಗಳು ಸೇರ್ಪಡೆ ಆಗುತ್ತಿದ್ದಾರೆ ಎಂದರು. ಶ್ರೀಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ| ವಾದಿರಾಜಚಾರ್ಯ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next