ಕೊಲೊಂಬೊ: ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾ ಸರಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಗೆ ಸಾಲ ಸಿಗುವಂತೆ ವಿಶೇಷ ಸಹಾಯವೊಂದನ್ನು ಮಾಡಬೇಕೆಂದು ಭಾರತಕ್ಕೆ ಮನವಿ ಸಲ್ಲಿಸಿದೆ.
ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಹಾಗೂ ಆಸಿಯಾನ್ ರಾಷ್ಟ್ರಗಳ ಜತೆಗೆ ಹಲವಾರು ಸ್ತರಗಳ ಬಾಂಧವ್ಯವನ್ನು ಭಾರತ ಹೊಂದಿರುವುದರಿಂದ, ಆ ರಾಷ್ಟ್ರಗಳ ಮೂಲಕ ತನಗೆ ಧನಸಹಾಯ (ಬ್ರಿಡ್ಜ್ ಫೈನಾನ್ಸಿಂಗ್) ಮಾಡಲು ಭಾರತ, ಖಾತ್ರಿದಾರನಾಗಬೇಕೆಂದು ಶ್ರೀಲಂಕಾ ಮನವಿ ಮಾಡಿದೆ.
ಕಾರಣವೇನು?: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) ಮತ್ತಷ್ಟು ಸಾಲ ಪಡೆಯಲು ಶ್ರೀಲಂಕಾ ಸಿದ್ಧವಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸಾಲ ದುರ್ಲಭ.
ಹಾಗಾಗಿ, ಭಾರತವು ತನ್ನ ಸಿರಿವಂತ ಮಿತ್ರ ರಾಷ್ಟ್ರಗಳ ಮೂಲಕ ಗ್ಯಾರಂಟಿ ಕೊಟ್ಟರೆ ಅದರ ಆಧಾರದಲ್ಲಿ ಸಾಲ ಪಡೆಯುವುದು ಲಂಕಾದ ಲೆಕ್ಕಾ ಚಾರ. ಅಮೆರಿಕದಿಂದ ಸಾಲ ಪಡೆಯಲು ನಿರ್ಧರಿಸಿರುವ ಲಂಕಾ, ನಿಯೋಗವೊಂದನ್ನು ವಾಷಿಂಗ್ಟನ್‌ಗೆ ಮುಂದಿನವಾರ ಕಳುಹಿಸಲಿದೆ.
ಹೂಡಿಕೆಗೆ ಆಗ್ರಹಿಸಿದ ನೇಪಾಲ: ದಿವಾಳಿಯ ಅಂಚಿನಲ್ಲಿರುವ ನೇಪಾಲ, ವಿದೇಶಗಳಲ್ಲಿರುವ ತನ್ನ ಪ್ರಜೆಗಳಿಗೆ ತನ್ನಲ್ಲಿ ಹೂಡಿಕೆ ಮಾಡುವಂತೆ ಕರೆ ನೀಡಿದೆ. ವಿದೇಶಗಳಲ್ಲಿರುವ ಅನಿವಾಸಿ ನೇಪಾಲೀ ಯರು ನೇಪಾಲದಲ್ಲಿರುವ ಬ್ಯಾಂಕ್‌ಗಳಲ್ಲಿ ಡಾಲರ್ ವ್ಯವಹಾರಕ್ಕೆ ಅನುಕೂಲವಾಗು ವಂಥ ಬ್ಯಾಂಕ್ ಖಾತೆಗಳನ್ನು ತೆರೆಯ ಬೇಕು. 10 ಸಾವಿರ ಅಮೆರಿಕನ್ ಡಾಲರ್ ಹೂಡಿದರೆ 1 ಲಕ್ಷ ನೇಪಾಲಿ ರೂಪಾಯಿ ಸಿಗುತ್ತದೆ ಎಂದು ಸರಕಾರ ತಿಳಿಸಿದೆ.