Advertisement

Srikrishna Group of Dance; ಪರ್ಯಾಯ ಪ್ರಯುಕ್ತ ರಸಮಂಜರಿ, ನೃತ್ಯ ಪ್ರದರ್ಶನ

12:15 AM Jan 16, 2024 | Team Udayavani |

ಉಡುಪಿ: ಪುತ್ತಿಗೆ ಪರ್ಯಾಯ ಮಹೋತ್ಸವ ಪ್ರಯುಕ್ತ ಕಿನ್ನಿಮೂಲ್ಕಿ ಶ್ರೀಕೃಷ್ಣ ಗ್ರೂಪ್‌ ಆಫ್ ಡ್ಯಾನ್ಸ್‌ ವತಿಯಿಂದ ಜ. 17ರಂದು ಸಂಜೆ 7ಕ್ಕೆ ಕಿನ್ನಿಮೂಲ್ಕಿ ಜಂಕ್ಷನ್‌ ಬಳಿ ರಸಮಂಜರಿ, ನೃತ್ಯ ಆಯೋಜಿಸಲಾಗಿದೆ.

Advertisement

ಸಭಾ ಕಾರ್ಯಕ್ರಮದ ಉದ್ಘಾಟನೆ ಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ನೆರವೇರಿಸಲಿದ್ದಾರೆ. ಪ್ರಸಾದ್‌ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಶಾಸಕ ಯಶ್‌ಪಾಲ್‌ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ವಿಧಾನ ಪರಿಷತ್‌ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಉಪಸ್ಥಿತರಿರುವರು.

ಶಿಕ್ಷಣ ತಜ್ಞ ಡಾ| ಉಮಾ ರಾಜಶೇಖರ್‌ ದಿಕ್ಸೂಚಿ ಭಾಷಣ ಮಾಡುವರು. ಮಾಜಿ ಶಾಸಕರಾದ ಗೋಪಾಲ್‌ ಪೂಜಾರಿ,ಐವನ್‌ ಡಿ’ಸೋಜಾ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕಾಂಗ್ರೆಸ್‌ ಮುಖಂಡ ರಾದ ಎಂ.ಎ. ಗಫ‌ೂರ್‌, ಉದಯ ಕುಮಾರ್‌ ಶೆಟ್ಟಿ ಮುನಿಯಾಲು, ಪ್ರಖ್ಯಾತ್‌ ಶೆಟ್ಟಿ, ನಿಖೇತ್‌ರಾಜ್‌ ಮೌರ್ಯ, ಸುಧೀರ್‌ ಕುಮಾರ್‌ ಮುರೋಳಿ, ಮಿಥುನ್‌ ರೈ, ನಗರಸಭೆ ಪೌರಾಯುಕ್ತ ರಾಯಪ್ಪ, ವಿಶೇಷ ಸರಕಾರಿ ಅಭಿಯೋಜಕ ರಾಘವೇಂದ್ರ ವೈ.ಟಿ., ಪ್ರಮುಖರಾದ ಜಯಕರ ಶೆಟ್ಟಿ ಇಂದ್ರಾಳಿ, ಪುರುಷೋತ್ತಮ ಶೆಟ್ಟಿ, ಮನೋಹರ್‌ ಶೆಟ್ಟಿ, ಡಾ| ತಲ್ಲೂರು ಶಿವರಾಮ ಶೆಟ್ಟಿ, ಕೆ. ಉದಯ ಕುಮಾರ್‌ ಶೆಟ್ಟಿ, ಜೆರಿ ವಿನ್ಸೆಂಟ್‌ ಡಾಯಸ್‌, ಪ್ರವೀಣ್‌ ಶೆಟ್ಟಿ ಕಪ್ಪೆಟ್ಟು, ವಿಶೇಷ ಅತಿಥಿಗಳಾಗಿ ಗಬ್ಬರ್‌ಸಿಂಗ್‌ ಚಲನಚಿತ್ರ ತಂಡ, ಅರವಿಂದ್‌ ಬೋಳಾರ್‌, ನವೀನ್‌ ಡಿ. ಪಡೀಲ್‌, ಸಾಯಿ ಕೃಷ್ಣ, ವಜ್ರಾಂಗ್‌ ಶೆಟ್ಟಿ ಭಾಗವಹಿಸಲಿದ್ದಾರೆ.

ಸಾಧಕರಿಗೆ ಸಮ್ಮಾನ
ವಿವಿಧ ಕ್ಷೇತ್ರದ ಸಾಧಕರಾದ ಆರ್‌. ಮನೋಹರ್‌, ಯಶವಂತ್‌ ಪೂಜಾರಿ ನಿಟ್ಟೂರು, ಸೃಜನ್‌ ಪೂಜಾರಿ, ಅಖೀಲೇಶ್‌, ಆದಿತ್ಯ ಜಿ. ಕೋಟ್ಯಾನ್‌, ವಿಯಾನ್‌ ಮಸ್ಕರೇನ್ಹಸ್‌, ಡಾ| ವಾಣಿಶ್ರೀ ಐತಾಳ, ದಿನೇಶ್‌ ಕಾಂಚನ್‌, ಅರುಣ ಕಲಾ, ಜಶ್ವಿ‌ತ್‌ ಜೆ. ದೇವಾ ಡಿಗ, ಅಭಿನವ್‌ ಆಚಾರ್ಯ ಕಿನ್ನಿಮೂಲ್ಕಿ, ಚಿತ್ರಾ ಅವರನ್ನು ಸಮ್ಮಾನಿಸಲಾಗುವುದು.

ರಸ ಮಂಜರಿ
ಸಂಜೆ 6.30ಕ್ಕೆ ಚಿಟ್ಪಾಡಿ ಶ್ರೀದೇವಿ ಚೆಂಡೆ ಬಳಗದ ವತಿಯಿಂದ ಚೆಂಡೆ ನಿನಾದ. 9ರಿಂದ ಪ್ರಖ್ಯಾತ ಗೀಟಾರ್‌ ವಾದಕ ರಾಜ್‌ಗೋಪಾಲ್ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಕಲಾವಿದರನ್ನು ಒಳಗೊಂಡ ಝಿ ಟಿವಿ ಸರಿಗಮಪ ಹಾಗೂ ಕಲರ್ಸ್‌ ಚಾನೆಲ್‌ನ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಗಾಯಕರನ್ನು ಒಳಗೊಂಡ ಚಲನಚಿತ್ರ ತಾರೆಯರ ರಸಮಂಜರಿ ಹಾಗೂ ನೃತ್ಯ ಪ್ರಸ್ತುತಗೊಳ್ಳಲಿದೆ ಎಂದು ಶ್ರೀ ಕೃಷ್ಣ ಗ್ರೂಪ್‌ ಆಫ್ ಡ್ಯಾನ್ಸ್‌ನ ಸಂಸ್ಥಾಪಕ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next