Advertisement

ಶ್ರೀಕಂಠೇಶ್ವರನ ಕಣ್ತುಂಬಿ ಕೊಂಡ ‌ಭಕ್ತರು

01:40 PM Jul 06, 2021 | Team Udayavani |

ನಂಜನಗೂಡು: ಕೊರೊನಾ 2ನೇ ಅಲೆಯಿಂದ ಕಳೆದ 75 ದಿನಗಳಿಂದ ಬಾಗಿಲು ಹಾಕಿದ್ದ ದಕ್ಷಿಣ ಕಾಶಿ ಶ್ರೀಕಂಠೇಶ್ವರ ದೇವಾಯದ ಬಾಗಿಲು ಸೋಮವಾರ ತೆರೆಯುವುದರೊಂದಿಗೆ ಭಕ್ತರಿಗೆ ತಮ್ಮ ಆರಾಧ್ಯ ದೈವವನ್ನು ಕಂಡು ಪುಳುಕಿತರಾಗುವ ಅವಕಾಶ ಲಭ್ಯವಾದಂತಾಗಿದೆ

Advertisement

ನಿರ್ಬಂಧ ತೆರವುಗೊಳಿಸಿದ್ದರಿಂದ ಸೋಮವಾರ ಸಹಸ್ರಾರು ಭಕ್ತರು ನಂಜನಗೂಡಿಗೆ ಆಗಮಿಸಿ ಕಪಿಲಾನದಿಯಲ್ಲಿ ಪುಣ್ಯ ಸ್ನಾನ ಮಾಡಿ ಸ್ಥಳಾಧಿಪತಿ ಶ್ರೀಕಂಠೇಶ್ವರನಿಗೆ ಯಾವುದೇ ಸೇವೆ ಅರ್ಪಿಸಲಾಗದಿದ್ದರೂ ಕಣ್ನೋಟದ ದರ್ಶನ ಪಡೆದು ಧನ್ಯತಾಭಾವ ಮೆರೆದರು.

ದೇವಾಲಯದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮಾರ್ಗದರ್ಶನದಲ್ಲಿ ಭಾನುವಾರ ಬೆಳಗಿನಿಂದಲೇ ಭಕ್ತರ ಆಗಮನಕ್ಕಾಗಿ ಹಾಗೂ ಬಂದವರ ಸುರಕ್ಷತೆಗಾಗಿ ದೇವಾಲಯದ ಆವರಣದ ಸ್ಯಾನಿಟೈಸರ್‌ ಸ್ವಚ್ಛತೆಯೂ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಪ್ರತಿಸೋಮವಾರಕ್ಕೆ ಹೊಲಿಸಿದರೆ ಮೊದಲ ದಿನ ಭಕ್ತರ ಸಂಖ್ಯೆಕಡಿಮೆಯೇ ಇತ್ತು.

ದೇವಾಲಯದ ಬಾಗಿಲು ತೆರೆಯುತ್ತದೆಯೋಇಲ್ಲವೋ ಎಂಬ ಗೊಂದಲ ಸಾರ್ವಜನಿಕರಲ್ಲಿಮೂಡಿದ್ದರ ಫ‌ಲವಾಗಿ ಮೊದಲ ದಿನ ಉಳಿದ ಸೋಮವಾರಕ್ಕಿಂತಕಡಿಮೆ ಭಕ್ತರು ಭಗವಂತನ ಸನ್ನಿಧಿಗೆಆಗಮಿಸಿದ್ದರು. ಇದರಿಂದ ಅಂತರ ಕಾಪಾಡಲು ಸಾಧ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next